ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚಳಿಯ ಗಾಯನಕ್ಕೆ ತುಂತುರು ಮಳೆಯ ಪಕ್ಕವಾದ್ಯ
ಮದ್ರಾಸಿಗೆ ನೆಗಡಿಯಾದರೆ ಬೆಂಗಳೂರು ಆಕ್ಷೀ ಅನ್ನುತ್ತದೆ ಎಂಬುದು ಬೆಂಗಳೂರಿನ ಹವಾಮಾನದ ಕುರಿತು ಹೇಳುವ ತಮಾಷೆಯ ಮಾತು. ಬೆಂಗಳೂರಿನ ಕಳೆದ ಎರಡು ದಿನಗಳ ವಾತಾವರಣ ಈ ಮಾತನ್ನು ಮೆಲುಕುಹಾಕುವಂತೆ ಮಾಡಿದೆ.

ಹೌದು. ನಿನ್ನೆ ಪ್ರಾರಂಭವಾದ ಕೊರೆಯುವ ಚಳಿ ಇನ್ನೂ ಮುಂದುವರೆದಿದೆ. ಇದರೊಂದಿಗೆ ಇಂದು ಮುಂಜಾನೆಯಿಂದಲೇ ಶುರುವಾದ ತುಂತುರು ಮಳೆಯ ಪಕ್ಕವಾದ್ಯ ಬೇರೇ!! ಉದ್ಯಾನ ನಗರಿಗರು ಮತ್ತೆರಡು ಡೋಸ್ ಕಾಫಿಗೆ ಮೊರೆ ಹೋಗಲು ಇದಕ್ಕಿಂತಾ ಮತ್ತೊಂದು ನೆವ ಬೇಕೇ?

ಮಧ್ಯಾಹ್ನವಾದರೂ ನಗರದಲ್ಲಿಂದು ಸೂರ್ಯನ ದರ್ಶನವೇ ಆಗಲಿಲ್ಲ. ಮೋಡಕವಿದ ವಾತಾವರಣ, ತುಂತುರುಮಳೆ, ಕೊರೆಯುವ ಚಳಿಯದ್ದೇ ರಾಜ್ಯಭಾರ. ಇದೇ ವಾತಾವರಣ ಇನ್ನೂ ಎರಡು ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂಬುದು ಹವಾಮಾನ ಇಲಾಖೆಯವರ ಅಭಿಮತ.

ತಮಿಳುನಾಡಿನ ಕರಾವಳಿಯಲ್ಲಿ ದಿನಂಪೂರ್ತಿ ಮಳೆ ಸುರಿಯುತ್ತಿರುವುದರಿಂದ ಉಂಟಾದ ವಾಯುಭಾರ ಕುಸಿತದ್ದೇ ಇದೆಲ್ಲಾ ಕಿತಾಪತಿ ಎಂಬುದು ಈ ಶಿಅಕಾಲ ಮಳೆ-ಕೊರೆವ ಚಳಿಷಿಗೆ ಹವಾಮಾನ ಇಲಾಖೆ ನೀಡುವ ಸ್ಪಷ್ಟೀಕರಣ.

ಒಟ್ನಲ್ಲಿ ಬೆಂಗ್ಳೂರು ತಣ್ಗಿದೆ.. ಅಷ್ಟೆ!!
ಮತ್ತಷ್ಟು
ಜನತಾ ಜನಾರ್ದನರಲ್ಲಿ ನ್ಯಾಯ ಕೇಳುವೆ: ಪುತ್ತಿಗೆ ಶ್ರೀ
ಮುಖ್ಯಮಂತ್ರಿ ಐ ಲವ್ ಯೂ ನಿರ್ಬಂಧಕ್ಕೆ ನಕಾರ
ಕುಮಾರಣ್ಣನ ವಿರುದ್ಧ ದಾವೆ
ಕುಮಾರಸ್ವಾಮಿಗೆ ನಾಳೆ ಶಸ್ತ್ತ್ರಚಿಕಿತ್ಸೆ
ಚುನಾವಣೆ ನಂತರ ಅಕ್ರಮ ಗಣಿಗಾರಿಕೆ ವರದಿ
ಹಾವು ಹುತ್ತದಲ್ಲಿ ಮಾತ್ರವಲ್ಲ... ವಿಸ್ಕಿ ಬಾಟಲಿಯಲ್ಲೂ..!!