ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿಶ್ವೇಶ್ವರಯ್ಯ ನಾಲೆ ಒಡೆದು ಫಸಲು ನಷ್ಟ
ವಿಶ್ವೇಶ್ವರಯ್ಯ ನಾಲೆ ಒಡೆದಿದ್ದರ ಪರಿಣಾಮವಾಗಿ ರೈತರ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಲಕ್ಷಾಂತರ ರೂ.ಬೆಲೆಯ ಬೆಳೆ ನಾಶವಾಗಿದೆ ಎಂದು ತಿಳಿದುಬಂದಿದೆ.

ಮಂಡ್ಯ ತಾಲ್ಲೂಕಿನ ದುದ್ದ ಸಮೀಪದ ಕನ್ನಹಟ್ಟಿ ಗ್ರಾಮದ ಬಳಿ ಇದು ಸಂಭವಿಸಿದೆ. ಈ ನಾಲೆಯಲ್ಲಿ ಬಿರುಕು ಬಿಟ್ಟಿರುವುದರ ಕುರಿತು ಹದಿನೈದು ದಿನಗಳ ಹಿಂದೆಯೇ ನೀರಾವರಿ ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ದುರಸ್ತಿ ಕ್ರಮ ಕೈಗೊಳ್ಳದೆ ಅವರು ನಿರ್ಲಕ್ಷ್ಯ ತೋರಿದ್ದರು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ 9 ಗಂಟೆಯಾದರೂ ನೀರಾವರಿ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಈ ಸ್ಥಳಕ್ಕೆ ಬಂದಿರಲಿಲ್ಲ. ಬೆಳೆ ನಷ್ಟದಿಂದ ಆಕ್ರೋಶಗೊಂಡಿದ್ದ ರೈತರು ಈ ಕಾರಣದಿಂದಾಗಿ ಆಕ್ರೋಶಗೊಂಡು ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಿದ್ದುದನ್ನು ಕಾಣಬಹುದಾಗಿತ್ತು.

ಕನ್ನಹಟ್ಟಿಯೂ ಸೇರಿದಂತೆ ಶಿವಳ್ಳಿ, ಹುಳ್ಳೇನಹಳ್ಳಿ, ದುದ್ದ ಗ್ರಾಮಗಳಲ್ಲಿ ಸಣ್ಣ ಹಿಡುವಳಿ ರೈತರೇ ಹೆಚ್ಚಾಗಿದ್ದಾರೆ. ನಷ್ಟಕ್ಕೊಳಗಾಗಿರುವ ರೈತರು ಇಂದು ಮಳೆಯನ್ನೂ ಲೆಕ್ಕಿಸದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಮತ್ತಷ್ಟು
ಚಳಿಯ ಗಾಯನಕ್ಕೆ ತುಂತುರು ಮಳೆಯ ಪಕ್ಕವಾದ್ಯ
ಜನತಾ ಜನಾರ್ದನರಲ್ಲಿ ನ್ಯಾಯ ಕೇಳುವೆ: ಪುತ್ತಿಗೆ ಶ್ರೀ
ಮುಖ್ಯಮಂತ್ರಿ ಐ ಲವ್ ಯೂ ನಿರ್ಬಂಧಕ್ಕೆ ನಕಾರ
ಕುಮಾರಣ್ಣನ ವಿರುದ್ಧ ದಾವೆ
ಕುಮಾರಸ್ವಾಮಿಗೆ ನಾಳೆ ಶಸ್ತ್ತ್ರಚಿಕಿತ್ಸೆ
ಚುನಾವಣೆ ನಂತರ ಅಕ್ರಮ ಗಣಿಗಾರಿಕೆ ವರದಿ