ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಯು ಹೊಂದಾಣಿಕೆಕೆ ಸಿದ್ಧ: ಶಂಭು ಶ್ರೀವಾಸ್ತವ
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಬೇರಾವುದೇ ಪಕ್ಷದೊಂದಿಗೆ ಜೆಡಿಯು ಹೊಂದಾಣಿಕೆಗೆ ಸಿದ್ಧವಿದೆ ಎಂದು ಪಕ್ಷದ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ ಡಾ|ಶಂಭು ಶ್ರೀವಾಸ್ತವ ತಿಳಿಸಿದ್ದಾರೆ.

ಜೆಡಿಯು ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ರಾಜ್ಯಕ್ಕೆ ಭೇಟಿ ಇತ್ತಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜೆಡಿಯು ಸೇರಲು ಬಯಸಿದ್ದಾರೆ. ಅಂತೆಯೇ ಮಾಜಿ ಸಚಿವ ಎಂ.ಪಿ.ಪ್ರಕಾಶ್‌ರವರೂ ಜೆಡಿಯುಗೆ ಮರಳಲಿ ಎಂದು ನಮ್ಮ ಬಯಕೆ ಎಂದು ತಿಳಿಸಿದ ಶ್ರೀವಾಸ್ತವ ಈ ಕುರಿತು ಅವರೊಂದಿಗೂ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಮುಂಬರುವ ವಿಧಾನ ಸಭೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಬದಲು ಪಕ್ಷದ ಪ್ರಭಾವ ಹೆಚ್ಚಿರುವ ಕಡೆ ಮಾತ್ರ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ ಎಂದು ತಿಳಿಸಿದ ಶ್ರೀವತ್ಸ, ರಾಜ್ಯದಲ್ಲಿ ಪಕ್ಷ ಸಂಘಟನೆಗೀಗ ಗಮನ ಕೊಡಬೇಕಿರುವುದರಿಂದ ವಿಭಾಗೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷದ ಸಮಾವೇಶವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಈ ಸಮಾವೇಶಗಳಲ್ಲಿ ಬಿಹಾರದ ಮುಖ್ಯಮಂತ್ರಿ, ಸಚಿವರುಗಳು ಭಾಗವಹಿಸಲಿದ್ದಾರೆ. ಭ್ರಷ್ಟಾಚಾರ ಹಾಗೂ ಜನವಿರೋಧಿಯಾಗಿರುವ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆಯ ವಿಷಯಗಳನ್ನು ಮುಂದಿಟ್ಟುಕೊಂಡು ಪಕ್ಷ ಚುನಾವಣೆಯಲ್ಲಿ ಹೋರಾಡಲಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.
ಮತ್ತಷ್ಟು
ಸಮ್ಮಿಶ್ರ ಸರ್ಕಾರದ ಹಗರಣಗಳ ತನಿಖೆಯಾಗಲಿ
ಜಿಲ್ಲೆ ಜಿಲ್ಲೆಯಲ್ಲೂ ಸಮಾವೇಶ: ಕೃಷ್ಣ ಭೈರೇಗೌಡ
ವಿಶ್ವೇಶ್ವರಯ್ಯ ನಾಲೆ ಒಡೆದು ಫಸಲು ನಷ್ಟ
ಚಳಿಯ ಗಾಯನಕ್ಕೆ ತುಂತುರು ಮಳೆಯ ಪಕ್ಕವಾದ್ಯ
ಜನತಾ ಜನಾರ್ದನರಲ್ಲಿ ನ್ಯಾಯ ಕೇಳುವೆ: ಪುತ್ತಿಗೆ ಶ್ರೀ
ಮುಖ್ಯಮಂತ್ರಿ ಐ ಲವ್ ಯೂ ನಿರ್ಬಂಧಕ್ಕೆ ನಕಾರ