ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ: ಯಡಿಯೂರಪ್ಪ
NEWS ROOM
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸದಾನಂದ ಗೌಡರೇ ಮುಂದುವರಿಯಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರೇ ಪಕ್ಷದ ಸಾರಥ್ಯ ವಹಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಅಧ್ಯಕ್ಷರ ಬದಲಾವಣೆಯ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ನಿರಾಕರಿಸುತ್ತಾ, ಪಕ್ಷದಲ್ಲಿ ಈ ಕುರಿತು ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷ ರಾಜ್ನಾಥ್ ಸಿಂಗ್, ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿ ಸೇರಿದಂತೆ ಎಲ್ಲಾ ಪ್ರಮುಖ ನಾಯಕರ ಜೊತೆ ಯಡಿಯೂರಪ್ಪನವರು ಚರ್ಚೆ ನಡೆಸಿದ್ದು ರಾಜ್ಯದಲ್ಲಿ ಮುಂಬರಲಿರುವ ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದ ವಿಷಯ ಅದರಲ್ಲಿ ಸೇರಿತ್ತು ಎಂದು ತಿಳಿದುಬಂದಿದೆ.

ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಬಿಜೆಪಿ ಮತದಾರರ ಒಲವು ಗಳಿಸಲಿದೆ ಎಂಬ ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದ ಯಡಿಯೂರಪ್ಪ ಕಾಂಗ್ರೆಸ್ ಪಕ್ಷಕ್ಕೆ ಹತಾಶೆ ಆವರಿಸಿದೆ. ನಾವು ಕೈಗೊಂಡ ಅಭಿವೃದ್ದಿ ಕಾರ್ಯವನ್ನು ಮುಂದುಮಾಡಿಯೇ ಮತ ಕೇಳಲಾಗುವುದು ಎಂದು ತಿರುಗೇಟು ನೀಡಿದರು.
ಮತ್ತಷ್ಟು
ಜೆಡಿಯು ಹೊಂದಾಣಿಕೆಕೆ ಸಿದ್ಧ: ಶಂಭು ಶ್ರೀವಾಸ್ತವ
ಸಮ್ಮಿಶ್ರ ಸರ್ಕಾರದ ಹಗರಣಗಳ ತನಿಖೆಯಾಗಲಿ
ಜಿಲ್ಲೆ ಜಿಲ್ಲೆಯಲ್ಲೂ ಸಮಾವೇಶ: ಕೃಷ್ಣ ಭೈರೇಗೌಡ
ವಿಶ್ವೇಶ್ವರಯ್ಯ ನಾಲೆ ಒಡೆದು ಫಸಲು ನಷ್ಟ
ಚಳಿಯ ಗಾಯನಕ್ಕೆ ತುಂತುರು ಮಳೆಯ ಪಕ್ಕವಾದ್ಯ
ಜನತಾ ಜನಾರ್ದನರಲ್ಲಿ ನ್ಯಾಯ ಕೇಳುವೆ: ಪುತ್ತಿಗೆ ಶ್ರೀ