ನಗರದ ಎಲ್ಲ ಬಡಾವಣೆಗಳಲ್ಲಿ ಇಂದು ಭಗವಂತನ ಭಕ್ತರದ್ದೇ ರಾಜ್ಯಭಾರ. ಇಂದು ವೈಕುಂಠ ಏಕಾದಶಿಯಾಗಿರುವುದು ಒಂದು ಕಾರಣವಾದರೆ, ಕುಮಾರಸ್ವಾಮಿಯವರಿಗೆ ನಡೆಯುತ್ತಿರುವ ಶಸ್ತ್ತ್ರಚಿಕಿತ್ಸೆ ಯಶಸ್ವಿಯಾಗಿ ಅವರು ಬೇಗ ಗುಣಮುಖರಾಗಲೆಂದು ಹಾರೈಸಿ ಜೆಡಿಎಸ್ ಮುಖಂಡರು-ಕಾರ್ಯಕರ್ತರ ಪಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಿರುವುದು ಇನ್ನೊಂದು ಕಾರಣ.
ಕುಮಾರಸ್ವಾಮಿಯವರ ನಿಕಟವರ್ತಿಗಳಾದ ಚೆಲುವರಾಯಸ್ವಾಮಿ, ಜಮೀರ್ ಅಹಮದ್, ಪುಟ್ಟಣ್ಣ ಮೊದಲಾದವರು ದೇವಾಲಯಗಳಿಗೆ ತೆರಳಿ ಇಂದು ವಿಶೇಷ ಪೂಜೆ ಸಲ್ಲಿಸಿದವರಲ್ಲಿ ಪ್ರಮುಖರು. ಇದರೊಂದಿಗೆ ಜೆಡಿಎಸ್ ಕಾರ್ಯಕರ್ತರು ಚಿಕ್ಕಪೇಟೆಯ ದೇವಾಲಯವೊಂದರಲ್ಲಿ 101 ತೆಂಗಿನ ಕಾಯಿಯನ್ನು ಒಡೆದು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಇದೇ ವೇಳೆಗೆ ಕುಮಾರಸ್ವಾಮಿ ಬೇಗ ಗುಣಮುಖರಾಗಲೆಂದು ಹಾರೈಸಿ ಅವರ ಕುಟುಂಬ ತಿರುಪತಿ ಹಾಗೂ ಶ್ರೀರಂಗಪಟ್ಟಣ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
|