ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಣ್ಣನಿಗೆ ಇಂದು ಶಸ್ತ್ತ್ರಚಿಕಿತ್ಸೆ
ND
ಹೃದಯಕ್ಕೆ ರಕ್ತ ಪೂರೈಕೆ ಮಾಡುವ ರಕ್ತನಾಳದಲ್ಲಿ ಕಂಡುಬಂದ ತೊಂದರೆಯಿಂದಾಗಿ ವೊಕ್ಹಾರ್ಟ್ ಅಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಇಂದು ತೆರೆದ ಹೃದಯದ ಶಸ್ತ್ತ್ರಚಿಕಿತ್ಸೆ ನಡೆಯಲಿದೆ.

ಶಸ್ತ್ತ್ರಚಿಕಿತ್ಸೆಯ ಹೊಣೆ ಹೊತ್ತಿರುವ ಡಾ| ಜವಳಿಯವರೊಂದಿಗೆ ಜಯದೇವ ಆಸ್ಪತ್ರೆಯ ಶಸ್ತ್ತ್ರಚಿಕಿತ್ಸಾ ತಜ್ಞ ಹಾಗೂ ದೇವೇಗೌಡರ ಅಳಿಯ ಡಾ| ಮಂಜುನಾಥ್ ಕೂಡ ನೆರವಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೃದಯದ ಮುಖ್ಯ ಕವಾಟದಲ್ಲಿ ಲವಣಾಂಶ ಶೇಖರಣೆಯಾಗುವುದರಿಂದ ಅದು ಗಟ್ಟಿಯಾಗಿ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. 100ರಲ್ಲಿ ಕೇವಲ ಇಬ್ಬರಿಗೆ ಈ ಸಮಸ್ಯೆ ಕಂಡುಬರುತ್ತದೆ. ಕೆಲವರಿಗೆ ಈ ಸಮಸ್ಯೆ ಹುಟ್ಟಿನಿಂದಲೇ ಇದ್ದರೆ, ಕೆಲವರಿಗೆ ವಯಸ್ಸಾದ ನಂತರ ಕಂಡುಬರುತ್ತದೆ. ಕುಮಾರಸ್ವಾಮಿಯವರಿಗೆ ಹುಟ್ಟಿನಿಂದಲೇ ಈ ಸಮಸ್ಯೆ ಇರುವುದರಿಂದ ಈಗ ಉಲ್ಬಣಗೊಂಡು ಉಸಿರಾಟಕ್ಕೆ ತೊಂದರೆಯುಂಟುಮಾಡುತ್ತಿತ್ತು ಎಂದು ತಿಳಿದುಬಂದಿದೆ.

ರಕ್ತ ಪರಿಚಲನೆಯ ಕವಾಟ ಬ್ಲಾಕ್ ಆಗಿರುವ ಸಮಸ್ಯೆಯನ್ನು ಕುಮಾರಸ್ವಾಮಿಯವರು ಎದುರಿಸುತ್ತಿದ್ದು ಈ ಶಸ್ತ್ತ್ರಚಿಕಿತ್ಸೆಯಲ್ಲಿ ಆ ಕವಾಟವನ್ನು ಬದಲಿಸಲಾಗುವುದೆಂದು ತಿಳಿದುಬಂದಿದೆ. ಶಸ್ತ್ತ್ರಚಿಕಿತ್ಸೆಯ ನಂತರ 48 ಗಂಟೆಗಳ ಕಾಲ ಕುಮಾರಸ್ವಾಮಿಯವರನ್ನು ಐಸಿಯುನಲ್ಲಿ ಇರಿಸಲಾಗುವುದು. ನಂತರ 50 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈಗಾಗಲೇ ವೊಕ್ಹಾರ್ಟ್ ಆಸ್ಪತ್ರೆಯ ಬಳಿ ಗಣ್ಯರು, ಜೆಡಿಎಸ್ ಮುಖಂಡರು ಹಾಗೂ ಕುಮಾರಸ್ವಾಮಿಯವರ ಅಭಿಮಾನಿಗಳ ದಂಡೇ ಸೇರಿದೆ. ಆದರೆ ಸದ್ಯಕ್ಕೆ ವಾರ್ಡ್ ಬಳಿ ಯಾರನ್ನೂ ಬಿಡುತ್ತಿಲ್ಲ ಎಂದು ತಿಳಿದುಬಂದಿದೆ.
ಮತ್ತಷ್ಟು
ಕುಮಾರಣ್ಣನ ಶಸ್ತ್ತ್ರಚಿಕಿತ್ಸೆ ಯಶಸ್ಸಿಗೆ ಪೂಜೆ
ವೈಕುಂಠ ಏಕಾದಶಿ: ಭಗವಂತನ ದರ್ಶನಕ್ಕೆ ಉತ್ಸಾಹ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ: ಯಡಿಯೂರಪ್ಪ
ಜೆಡಿಯು ಹೊಂದಾಣಿಕೆಕೆ ಸಿದ್ಧ: ಶಂಭು ಶ್ರೀವಾಸ್ತವ
ಸಮ್ಮಿಶ್ರ ಸರ್ಕಾರದ ಹಗರಣಗಳ ತನಿಖೆಯಾಗಲಿ
ಜಿಲ್ಲೆ ಜಿಲ್ಲೆಯಲ್ಲೂ ಸಮಾವೇಶ: ಕೃಷ್ಣ ಭೈರೇಗೌಡ