ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಲಿ ಸಂಸದೆ ತೇಜಸ್ವಿನಿ ಸಿನೆಮಾ ನಾಯಕಿ
ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರು ಮುಖ್ಯಮಂತ್ರಿ ಐ ಲವ್ ಯೂ ಎಂಬ ಹೆಸರಿನ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುತ್ತಿರುವ ಸುದ್ದಿಯ ಬಿಸಿ ಆರುವುದರ ಮೊದಲೇ ಅಂತಹ ಮತ್ತೊಂದು ಸುದ್ದಿ ಹೊರಬಂದಿದೆ. ಆದರೆ ಈಗಿನ ಸುದ್ದಿಯ ಹಿನ್ನೆಲೆಯಲ್ಲಿ ಮಾಜಿ ಪತ್ರಕರ್ತೆ, ಹಾಲಿ ಸಂಸದೆ ತೇಜಸ್ವಿನಿ ನಿಂತಿದ್ದಾರೆ.

ತೇಜಸ್ವಿನಿ ಎಂಬ ಹೆಸರಿನ ಚಿತ್ರ ಸದ್ಯದಲ್ಲಿಯೇ ಸೆಟ್ಟೇರಲಿದ್ದು, ಮಾಜಿ ಪತ್ರಕರ್ತೆ ತೇಜಸ್ವಿನಿ ಅದರ ನಾಯಕಿ ಪಾತ್ರ ವಹಿಸಲಿದ್ದರೆ, ರಮೇಶ್ ಅರವಿಂದ್ ನಾಯಕ ಪಾತ್ರ ವಹಿಸಲಿದ್ದಾರೆ. ಇದರೊಂದಿಗೆ ಚಲನಚಿತ್ರರಂಗಕ್ಕೆ ಕಾಲಿರಿಸುತ್ತಿರುವ ಪತ್ರಕರ್ತರ ಸಾಲಿಗೆ ತೇಜಸ್ವಿನಿಯವರೂ ಸೇರಿದಂತಾಗಿದೆ.

ಈ ಹಿಂದೆ ಪಿ.ಲಂಕೇಶ್, ಅಗ್ನಿ ಶ್ರೀಧರ್, ಎನ್.ಎಸ್.ಶಂಕರ್, ಇಂದ್ರಜಿತ್ ಲಂಕೇಶ್, ರಾಜ್ಹನ್ಸ್ ಬಾಲಚಂದ್ರ ಮೊದಲಾದವರೆಲ್ಲಾ ಚಿತ್ರರಂಗದ ಅಖಾಡಕ್ಕೆ ಇಳಿದವರೇ. ಇದಕ್ಕೆ ನಿರ್ದೇಶಕರಾಗಿ ತೀರಾ ಇತ್ತೀಚಿನ ಸೇರ್ಪಡೆ ರವಿ ಬೆಳಗೆರೆಯವರದಾಗಿತ್ತು.

ಪತ್ರಕರ್ತೆಯಾಗಿ ವೃತ್ತಿಜೀವನವನ್ನು ಆರಂಭಿಸಿ, ಟಿವಿ ಚಾನೆಲ್ ವರದಿಗಾರ್ತಿ-ಸಂದರ್ಶಕಿಯಾಗಿ ಮುಂದುವರೆಯುವ ಕಥಾನಾಯಕಿ ಕೊನೆಗೆ ರಾಜ್ಯದ ಮುಖ್ಯಮಂತ್ರಿಯಾಗುವ ಕಥೆಯನ್ನು ಈ ಚಿತ್ರ ಹೊಂದಿದೆ ಎನ್ನಲಾಗಿದೆ. ಇದೊಂದು ಸಕಾರಾತ್ಮಕ ಅಂಶವನ್ನು ಒಳಗೊಂಡ ಚಿತ್ರ. ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಲು ಇರುವ ಅವಕಾಶಗಳು, ಅವುಗಳ ಸದ್ಬಳಕೆ, ಇದರಿಂದ ಸಮಾಜಕ್ಕಾಗುವ ಅನುಕೂಲ ಇವುಗಳನ್ನು ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಡಲಾಗುವುದು ಎಂದು ತೇಜಸ್ವಿನಿ ತಿಳಿಸಿದ್ದಾರೆ.
ಮತ್ತಷ್ಟು
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಖರ್ಗೆ
ವಿವಾದ ಬೆಳೆಸುವುದು ಒಳ್ಳೆಯದಲ್ಲ: ಯಡಿಯೂರಪ್ಪ
ಕುಮಾರಣ್ಣನಿಗೆ ಇಂದು ಶಸ್ತ್ತ್ರಚಿಕಿತ್ಸೆ
ಕುಮಾರಣ್ಣನ ಶಸ್ತ್ತ್ರಚಿಕಿತ್ಸೆ ಯಶಸ್ಸಿಗೆ ಪೂಜೆ
ವೈಕುಂಠ ಏಕಾದಶಿ: ಭಗವಂತನ ದರ್ಶನಕ್ಕೆ ಉತ್ಸಾಹ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ: ಯಡಿಯೂರಪ್ಪ