ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿ.23ರಂದು ಸಿಂಧ್ಯ ಬಿಎಸ್ಪಿಗೆ ಸೇರ್ಪಡೆ
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಇದೇ ತಿಂಗಳ 23ರಂದು ಬಹುಜನ ಸಮಾಜ ಪಕ್ಷವನ್ನು ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಸರ್ವಜನ ಸಹೋದರತ್ವ ಸಮಾವೇಶದಲ್ಲಿ ಬಿಎಸ್ಪಿ ನಾಯಕಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರ ಸಮ್ಮುಖದಲ್ಲಿ ಸಿಂಧ್ಯ ಪಕ್ಷ ಸೇರಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಜೆಡಿಎಸ್ ಸಂಪರ್ಕ ಕಳೆದುಕೊಂಡಿದ್ದ ಸಿಂಧ್ಯ ಬಿಎಸ್‌ಪಿಯಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವ ನಿರ್ಧಾರ ಮಾಡಿದ್ದರು. ಇದೀಗ ಅಧಿಕೃತ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದೆ.

ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಿಎಸ್‌ಪಿ ಕಾರ್ಯಕರ್ತರು ಭಾಗವಹಿಸಲಿದ್ದು ಸಿಂಧ್ಯರೊಂದಿಗೆ ಅವರ ಬೆಂಬಲಿಗರೂ ಬಿಎಸ್‌ಪಿಗೆ ಸೇರ್ಪಡೆಯಾಗಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದವರು, ದಲಿತರು ಸೇರಿದಂತೆ ವಿವಿಧ ವರ್ಗಗಳ ಮತದಾರರನ್ನು ಸೆಳೆದಿದ್ದ ಬಿಎಸ್‌ಪಿ ದಕ್ಷಿಣ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ಪ್ರಥಮ ಬಾರಿಗೆ ಸಾಬೀತುಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಮತ್ತಷ್ಟು
ಕಾರನ್ನು ಹರಿಸಿದ ಬಾಲಕನಿಗೆ ಜಾಮೀನು
ಯೋಗಮಾಂತ್ರಿಕನ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು
ಹಾಲಿ ಸಂಸದೆ ತೇಜಸ್ವಿನಿ ಸಿನೆಮಾ ನಾಯಕಿ
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಖರ್ಗೆ
ವಿವಾದ ಬೆಳೆಸುವುದು ಒಳ್ಳೆಯದಲ್ಲ: ಯಡಿಯೂರಪ್ಪ
ಕುಮಾರಣ್ಣನಿಗೆ ಇಂದು ಶಸ್ತ್ತ್ರಚಿಕಿತ್ಸೆ