ಈಗಾಗಲೇ ಹಾಲು-ಮೊಸರಿನ ದರ ಹೆಚ್ಚಳ ಮಾಡಿರುವ ಕೆಎಂಎಫ್ ಕ್ರಮದಿಂದಾಗಿ ರೈತರಿಗೆ ಲಾಭವಾಗಬೇಕಿತ್ತು. ಆದರೆ ಲಾಭವಾಗುವ ಹಾಗೆ ಕಾಣುತ್ತಿಲ್ಲ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಹೆಚ್ಚಳ ವಿಪರೀತವಾಗಿದ್ದು ಅದನ್ನು ಇಳಿಸಬೇಕಿದೆ ಮತ್ತು ಲಾಭ ನೇರವಾಗಿ ರೈತರಿಗೆ ಸಿಗುವಂತೆ ಮಾಡಬೇಕಿದೆ. ಇಲ್ಲವಾದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಎಂಎಫ್ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವುದಾದರೆ ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ ಗ್ರಾಹಕರ ಮೇಲೆ ಹೊರೆ ಬೀಳುವಂತೆ ಮಾಡುವುದು ಸರಿಯಲ್ಲ. ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬೇಕಿದ್ದರೆ ಹಣಕಾಸು ಸಂಸ್ಥೆಗಳ ನೆರವು ಪಡೆಯಲಿ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಅವೈಜ್ಞಾನಿಕವಾಗಿ ಮಾಡಿರುವ ದರ ಹೆಚ್ಚಳ ಅಕ್ಷಮ್ಯ ಅಪರಾಧ. ಇದರ ವಿರುದ್ಧ ಶೀಘ್ರವೇ ಹೋರಾಟ ರೂಪಿಸಲಾಗುವುದು ಎಂದೂ ಸಹ ಯಡಿಯೂರಪ್ಪ ತಿಳಿಸಿದ್ದಾರೆ.
|