ದೇಶಾದ್ಯಂತ ಗಮನ ಸೆಳೆದಿರುವ ದತ್ತ ಜಯಂತಿ ಬಾಬಾ ಬುಡನ್‌ಗಿರಿಯಲ್ಲಿ ಇಂದು ನಡೆಯಲಿದ್ದು ಇದಕ್ಕಾಗಿ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಬಾ ಬುಡನ್‌ಗಿರಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿರುವ-ಬರುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಈಗಾಗಲೇ ಪೊಲೀಸರನ್ನು ನಿಯೋಜಿಸಲಾಗಿದೆ.
ಚುಮುಚುಮು ಚಳಿಯ ನಡುವೆಯೂ ಸಾವಿರಾರು ಭಕ್ತಾದಿಗಳು ಸೇರಿ ಭಜನೆ ಸಂಕೀರ್ತನೆ ನಡೆಸುತ್ತಿದ್ದು ಬೆಟ್ಟಕ್ಕೇ ಒಂದು ಹೊಸ ಕಳೆ ಬಂದಂತಾಗಿದೆ. ಎಲ್ಲೆಲ್ಲೂ ಹಸಿರನ್ನೇ ಉಟ್ಟುಕೊಂಡಿರುವ ಬಾಬಾ ಬುಡನ್‌ಗಿರಿಗೆ ಕೇಸರಿ ವಸ್ತ್ತ್ರ ಧರಿಸಿದ ಭಕ್ತಾದಿಗಳು ಲಗ್ಗೆಯಿಟ್ಟಿದ್ದು ಸಂಖ್ಯೆ ಕ್ರಮೇಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ದತ್ತ ಜಯಂತಿಯ ಸಂದರ್ಭದಲ್ಲಿ ಶೋಭಾಯಾತ್ರೆಯನ್ನು ನಡೆಸಲು ಬಜರಂಗದಳವು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ವ್ಯವಸ್ಥೆಗೊಳಿಸಲಾಗಿದೆ.
|