ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದತ್ತಜಯಂತಿಗೆ ರಾಜಕೀಯ ಸ್ವರೂಪ ಬೇಕಿಲ್ಲ: ಮುತಾಲಿಕ್
ಈಗ ನಡೆಯುತ್ತಿರುವುದು ಧಾರ್ಮಿಕ ದತ್ತ ಜಯಂತಿಯಲ್ಲ; ಬದಲಿಗೆ ರಾಜಕೀಯದ ಲೇಪವಿರುವ ದತ್ತ ಜಯಂತಿ. ಆದ್ದರಿಂದಲೇ ಇದನ್ನು ಬಹಿಷ್ಕರಿಸಬೇಕಾಗಿ ಬಂತು ಎಂದು ಶ್ರೀರಾಮ ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಹಿಂದೆ ಸಮ್ಮಿಶ್ರ ಸರ್ಕಾರದ ಪಾಲುದಾರನಾಗಿದ್ದ ಬಿಜೆಪಿ ದತ್ತಪೀಠದ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸದೆ ಅದನ್ನು ಸಮಸ್ಯೆಯಾಗಿಯೇ ಉಳಿಸಿದೆ. ಅವರ ಅಧಿಕಾರದ ಲಾಲಸೆಯೇ ಇದಕ್ಕೆ ಕಾರಣವಾಯಿತು ಎಂಬುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ದತ್ತ ಜಯಂತಿಯನ್ನು ನಾವು ಬಹಿಷ್ಕರಿಸಬೇಕಾಗಿ ಬಂತು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಬಾಬಾ ಬುಡನ್ಗಿರಿಯ ದರ್ಗಾ, ಮಸೀದಿ ಮೊದಲಾದವುಗಳು ಮುಸ್ಲಿಂ ಆಡಳಿತದಲ್ಲಿದ್ದವು. ಇದನ್ನು ಕೈತಪ್ಪಿಸಿ ಸರ್ಕಾರದ ಮುಜರಾಯಿ ಇಲಾಖೆಗೆ ಒಪ್ಪಿಸಿದ್ದು ತಮ್ಮ ಕಳೆದ ಒಂದು ವರ್ಷದ ಹೋರಾಟದ ಫಲ ಎಂದು ತಿಳಿಸಿದ ಮುತಾಲಿಕ್ ಶ್ರೀರಾಮ ಸೇನೆಗೆ ಯಾವುದೇ ರಾಜಕೀಯ ಬಯಕೆಗಳಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದರು.

ಇಷ್ಟೇ ಅಲ್ಲದೇ ನಮ್ಮ ಸಂಸ್ಕ್ಕತಿಯ ಮೇಲೆ ಮುಸ್ಲಿಮರ ಅತಿಕ್ರಮಣ ಕುರಿತು ಜನಜಾಗೃತಿಯನ್ನೂ ಉಂಟುಮಾಡಿದ್ದೇವೆ ಎಂದು ವಿವರಿಸಿದ ಮುತಾಲಿಕ್, ಹಿಂದೂ ಶ್ರದ್ದಾ-ಭಕ್ತಿಗಳ ಕೇಂದ್ರಗಳನ್ನು ಗೌರವಿಸಬೇಕಾದ್ದು ಅಲ್ಪಸಂಖ್ಯಾತ ಮುಸ್ಲಿಮರ ಕರ್ತವ್ಯ. ಇಲ್ಲದಿದ್ದರೆ ಸಾಮಾಜಿಕ-ಆರ್ಥಿಕ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮತ್ತಷ್ಟು
ದತ್ತ ಜಯಂತಿಗೆ ಸಾಕಷ್ಟು ಮುಂಜಾಗರೂಕತೆ
ಹಾಲು ದರ ಹೆಚ್ಚಳ ಅಕ್ಷಮ್ಯ: ಯಡಿಯೂರಪ್ಪ
ಡಿ.23ರಂದು ಸಿಂಧ್ಯ ಬಿಎಸ್ಪಿಗೆ ಸೇರ್ಪಡೆ
ಕಾರನ್ನು ಹರಿಸಿದ ಬಾಲಕನಿಗೆ ಜಾಮೀನು
ಯೋಗಮಾಂತ್ರಿಕನ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು
ಹಾಲಿ ಸಂಸದೆ ತೇಜಸ್ವಿನಿ ಸಿನೆಮಾ ನಾಯಕಿ