ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದೇಶ ಯಾತ್ರೆ ವಿವಾದ: ವಿಶ್ವೇಶತೀರ್ಥರಿಗೆ ಸವಾಲು
ಬಹಿರಂಗ ಚರ್ಚೆಗೆ 53 ಪ್ರಶ್ನೆಗಳ ಬಿಡುಗಡೆ
NEWS ROOM
ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರ ವಿದೇಶ ಯಾತ್ರೆಗೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥರು ಸಾರ್ವಜನಿಕರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವುದನ್ನು ಪರಿಗಣನೆಗೆ ತೆಗೆದುಕೊಂಡಿರುವ ಬೆಂಗಳೂರಿನ ಸಂಪ್ರದಾಯ ಸುಧಾರಣಾ ಸಮಿತಿಯು ಶ್ರೀಗಳಿಗೆ ಇದೀಗ ಬಹಿರಂಗ ಪ್ರಶ್ನೆಗಳನ್ನೊಡ್ಡಿದೆ.

ಸಮಿತಿಯ ಅಧ್ಯಕ್ಷರಾದ ಸತ್ಯರಾಜ್ 53 ಪ್ರಶ್ನೆಗಳನ್ನು ಮುಂದಿಟ್ಟು ಪೇಜಾವರ ಶ್ರೀಗಳ ಮತ್ತು ಅವರ ಸಮರ್ಥಕರಿಂದ ಇವಕ್ಕೆ ಉತ್ತರಗಳನ್ನು ಕೇಳಿದ್ದಾರೆ. ಪೇಜಾವರ ಶ್ರೀಗಳ ಖಾಸಗಿ ಭೇಟಿಯಿಂದ ಎಲ್ಲರ ಮನಸ್ಸಿನ ಸಂಶಯಗಳು ದೂರವಾಗುವುದು ಕಷ್ಟವಾಗುವುದರಿಂದ ಪತ್ರಿಕೆಗಳ ಮೂಲಕವೇ ಉತ್ತರ ನೀಡಿದರೆ ಸೂಕ್ತ ಎಂದು ಸತ್ಯರಾಜ್ ಒತ್ತಾಯಿಸಿದ್ದಾರೆ. 53 ಪ್ರಶ್ನೆಗಳ ಪೈಕಿ ಕೆಲವು ಇಲ್ಲಿವೆ:

1. ಅಷ್ಟಮಠಗಳಲ್ಲೇ ಆಂತರಿಕವಾಗಿ ಇತ್ಯರ್ಥಗೊಳ್ಳಬೇಕಾಗಿರುವ ಈ ಪರ್ಯಾಯ ವಿವಾದವು ಇನ್ನೂ ಇತ್ಯರ್ಥವಾಗುವ ಹಂತದಲ್ಲಿರುವಾಗ, ಈ ಬಗ್ಗೆ ಇದೇ ತಿಂಗಳ 28ರಂದು ಆಂತರಿಕ ಸಭೆಯೂ ನಿಶ್ಚಿತವಾಗಿರುವಾಗ ಇದ್ದಕ್ಕಿದ್ದಂತೆ ತಾವು ಈ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರ ಉದ್ದೇಶವೇನು?

2. ಈ ರೀತಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರಿಂದ ಈ ವಿವಾದ ಸುಖಾಂತವಾಗಿ ಇತ್ಯರ್ಥಗೊಳ್ಳಲು ತೊಡಕಾಗುವುದಿಲ್ಲವೇ? ಇದೆಲ್ಲವನ್ನು ತಿಳಿದೂ ತಾವು ಇದರಲ್ಲಿ ತೋರುತ್ತಿರುವ ಅತ್ಯಾತುರಕ್ಕೆ ಕಾರಣವೇನು?

3. ಹಿಂದಿನಿಂದಿಲೂ ನಡೆಯುತ್ತಿರುವ ಈ ಚರ್ಚೆಗೆ ತಮ್ಮಂತಹ ಹಿರಿಯ ಶ್ರೀಗಳಿಂದಲೂ ಇಷ್ಟರತನಕವೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲವೆಂದರೆ ಈ ವಿವಾದದಲ್ಲಿರುವ ಜಟಿಲತೆ ಏನು?

4. ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಅಕ್ಕಿಮುಹೂರ್ತ ಸಮಾರಂಭದಲ್ಲಿ ಅಷ್ಟಮಠಗಳ ನಾಲ್ಕೂ ದ್ವಂದ್ವ ಗಳ ಪೈಕಿ ಪ್ರತಿಯೊಂದು ದ್ವಂದ್ವ ಮಠವೂ ಅಂದರೆ ಪುತ್ತಿಗೆ, ಅದಮಾರು, ಶಿರೂರು, ಕಾಣಿಯೂರು ಮಠಗಳು ವಿದೇಶಯಾತ್ರೆ ತಪ್ಪಲ್ಲ; ಈ ಹಿನ್ನೆಲೆಯಲ್ಲಿ ಪುತ್ತಿಗೆ ಶ್ರೀಗಳ ಪರ್ಯಾಯಕ್ಕೆ ತಮ್ಮ ಪೂರ್ಣ ಬೆಂಬಲವಿದೆ,

ವಿದೇಶಯಾತ್ರಾ ಪ್ರಯುಕ್ತ ಬಹಿಷ್ಕಾರವಿರುವುದಾದರೆ ಹನುಮಂತನಿಗೂ ಬಹಿಷ್ಕಾರ ಹಾಕಿ ಎಂದು ಬಹಿರಂಗವಾಗಿ ಸಾರಿರುವಾಗ, ಘೋಷಿಸಿರುವಾಗ ಅಲ್ಲದೆ ಆ ಎಲ್ಲಾ ವಿಚಾರಗಳೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟವಾಗಿರುವಾಗ ಅದಕ್ಕೆ ಅಂದು ಯಾವ ಪ್ರತಿಕ್ರಿಯೆಯನ್ನೂ ನೀಡದ ತಾವು ಈಗ ಪರ್ಯಾಯೋತ್ಸವದ ಕೊನೇ ಗಳಿಗೆಯಲ್ಲಿ ವಿವಾದವನ್ನು ಒಮ್ಮಿಂದೊಮ್ಮೆಲೆ ಭುಗಿಲೆಬ್ಬಿಸಲು ಕಾರಣವೇನು? ಇದು ತಮಗೆ ಶೋಭೆಯೇ? ಎಂಬ ಪ್ರಶ್ನೆಗಳನ್ನು ಸಮಿತಿ ಮುಂದೊಡ್ಡಿದೆ.
ಮತ್ತಷ್ಟು
ಶ್ರೀರಾಮ ಸೇನೆಯಿಂದ ಶ್ರೀ ಸತ್ಯದತ್ತ ವ್ರತ
ದತ್ತಜಯಂತಿಗೆ ರಾಜಕೀಯ ಸ್ವರೂಪ ಬೇಕಿಲ್ಲ: ಮುತಾಲಿಕ್
ದತ್ತ ಜಯಂತಿಗೆ ಸಾಕಷ್ಟು ಮುಂಜಾಗರೂಕತೆ
ಹಾಲು ದರ ಹೆಚ್ಚಳ ಅಕ್ಷಮ್ಯ: ಯಡಿಯೂರಪ್ಪ
ಡಿ.23ರಂದು ಸಿಂಧ್ಯ ಬಿಎಸ್ಪಿಗೆ ಸೇರ್ಪಡೆ
ಕಾರನ್ನು ಹರಿಸಿದ ಬಾಲಕನಿಗೆ ಜಾಮೀನು