ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧ್ಯಕ್ಷ ಸ್ಥಾನ: ಕೆಪಿಸಿಸಿ ಗೊಂದಲದ ಗೂಡು
ರಾಜ್ಯ ಕೆಪಿಸಿಸಿ ಗದ್ದುಗೆಯನ್ನೇರಲು ಉದ್ಭವಿಸಿರುವ ತೀವ್ರ ಪೈಪೋಟಿಯಿಂದಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸಾರಥ್ಯವನ್ನು ಮಲ್ಲಿಕಾರ್ಜುನ ಖರ್ಗೆಯವರ ಬದಲು ಬೇರೊಬ್ಬರಿಗೆ ವಹಿಸುವುದು ಸೂಕ್ತ ಎಂದು ಕೆಲ ನಾಯಕರು ಒತ್ತಾಯ ಮಾಡಿದ್ದರೆ, ಯಾವ ಕಾರಣಕ್ಕೂ ಬದಲಾವಣೆ ಬೇಡ ಎಂದು ಮತ್ತೊಂದು ವಲಯ ಒತ್ತಡ ಹೇರಿತ್ತು.

ಈ ಹಿನ್ನೆಲೆಯಲ್ಲಿ ವಾಸ್ತವ ಸಂಗತಿಯನ್ನು ಅರಿಯಲು ಬೆಂಗಳೂರಿಗೆ ಧಾವಿಸಿದ್ದ ಪೃಥ್ವೀರಾಜ್ ಚೌಹಾಣ್, ಪಕ್ಷದ ನಾಯಕರು, ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ನಾಯಕತ್ವದ ಬದಲಾವಣೆ ಅಗತ್ಯವಿದೆಯೇ ಇಲ್ಲವೇ ಎಂಬುದರ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಚುನಾವಣೆಗಳು ಬಂದು ನಿಂತಿರುವಾಗ ಖರ್ಗೆಯವರನ್ನು ಬದಲಿಸಿದರೆ ದಲಿತ ಮತಗಳು ಕೈತಪ್ಪಿ ಹೋಗಬಹುದು. ಕರ್ನಾಟಕದಲ್ಲಿ ಬಿಎಸ್ಪಿ ಬೇರೂರುವ ಹಂತದಲ್ಲಿರುವಾಗ ಈ ಕ್ರಮ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೇ ಮುಳುವಾಗಬಹುದು ಎಂಬ ಚಿಂತೆಯೂ ಪಕ್ಷವನ್ನು ಕಾಡುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ಸಿದ್ದರಾಮಯ್ಯನವರಿಗೆ ಸೂಕ್ತ ಸ್ಥಾನಮಾನ ನೀಡದಿರುವುದೂ ಒಂದು ವರ್ಗದವರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಅಂಶಗಳನ್ನೂ ಗಮನಕ್ಕೆ ತಂದುಕೊಂಡು ಸದ್ಯದಲ್ಲಿಯೇ ಸರ್ವಮಾನ್ಯ ನಿರ್ಣಯವೊಂದನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಮತ್ತಷ್ಟು
ಸಿದ್ಧರಾಜು ಆತ್ಮಹತ್ಯೆ ತನಿಖೆಗೆ ತಂಡ ರಚನೆ
ವಿದೇಶ ಯಾತ್ರೆ ವಿವಾದ: ವಿಶ್ವೇಶತೀರ್ಥರಿಗೆ ಸವಾಲು
ಶ್ರೀರಾಮ ಸೇನೆಯಿಂದ ಶ್ರೀ ಸತ್ಯದತ್ತ ವ್ರತ
ದತ್ತಜಯಂತಿಗೆ ರಾಜಕೀಯ ಸ್ವರೂಪ ಬೇಕಿಲ್ಲ: ಮುತಾಲಿಕ್
ದತ್ತ ಜಯಂತಿಗೆ ಸಾಕಷ್ಟು ಮುಂಜಾಗರೂಕತೆ
ಹಾಲು ದರ ಹೆಚ್ಚಳ ಅಕ್ಷಮ್ಯ: ಯಡಿಯೂರಪ್ಪ