ವಿಶಾಲ ವ್ಯಾಪ್ತಿಯ ಮತ್ತು ಶ್ರೇಷ್ಠ ಚಿಂತನೆಗಳನ್ನು ಹೊಂದಿರುವ ವೀರಶೈವ ಧರ್ಮ ಮಠಾಧೀಶರ ಕೈಗೆ ಸಿಕ್ಕಿ ನಲುಗುತ್ತಿದೆ ಎಂದು ಖ್ಯಾತ ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಸ್ನೇಹಚಿಂತನಾ ಸಂಸ್ಥೆ ಇಂದು ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಬೌದ್ಧ ಧರ್ಮ ಶ್ರೇಷ್ಠ. ಆದರೂ ಅದರ ಅನುಕರಣೆ ಕಷ್ಟ ಎಂದದ್ದಲ್ಲದೆ, ಇಂದಿನ ರಾಜಕೀಯ ಪಕ್ಷಗಳ ವರ್ತನೆಯಿಂದ ತಮಗೆ ಬೇಸರ ಉಂಟಾಗಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಗಣಿ ಪಕ್ಷಗಳಾಗಿರುವುದೇ ಇದಕ್ಕೆ ಕಾರಣ ಎಂದು ನುಡಿದರು.
ಉಡುಪಿಯ ಶ್ರೀಕೃಷ್ಣ ಪೂಜೆ ಹಾಗೂ ಪರ್ಯಾಯ ವಿವಾದಕ್ಕೆ ಸಂಬಂಧಿಸಿ ಮಾತನಾಡುತ್ತಾ, ವಿದೇಶ ಪ್ರವಾಸ ಮಾಡಿಬಂದ ಸುಗುಣೇಂದ್ರರಿಗೆ ಕೃಷ್ಣಪೂಜೆಗೆ ಅವಕಾಶ ಇಲ್ಲವೆಂದ ಮೇಲೆ ವಿದೇಶ ಸುತ್ತಿಬಂದ ಯಾರೂ ಕೃಷ್ಣನ ಪೂಜೆ ಮಾಡುವಂತಿರುವುದಿಲ್ಲ ಎಂದು ಗೇಲಿ ಮಾಡಿದರು.
ಪೇಜಾವರ ಶ್ರೀಗಳ ಬಗೆಗೆ ತಮಗೆ ಈ ಮೊದಲು ತುಂಬಾ ಗೌರವ-ಭಕ್ತಿಗಳಿದ್ದವು. ಆದರೆ ಅವರು ಮುಸ್ಲಿಮರ ವಿರುದ್ಧ ದ್ವೇಷ ಬೆಳೆಸುತ್ತಿರುವುದನ್ನು ನೋಡಿ ಅವು ಹೊರಟುಹೋಗಿವೆ ಎಂದು ತಿಳಿಸಿದ ಅನಂತಮೂರ್ತಿಯವರು ರಾಜಕೀಯವೇ ಆಗಲಿ, ಮತ್ತಾವುದೇ ಕ್ಷೇತ್ರವೇ ಆಗಲಿ ನಾಯಕತ್ವ ವಹಿಸುವ ವಯಸ್ಸು ತಮ್ಮದಲ್ಲ ಎಂದು ತಿಳಿಸಿದರು.
|