ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೋಭಾಯಾತ್ರೆಗೆ ಕೋ. ಸೌ.ವೇದಿಕೆ ಖಂಡನೆ
ದತ್ತ ಜಯಂತಿಯ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಸಲು ಜಿಲ್ಲಾಡಳಿತವು ಷರತ್ತುಬದ್ಧ ಅನುಮತಿ ನೀಡಿರುವುದನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಖಂಡಿಸಿದೆ.

ಶೋಭಾಯಾತ್ರೆಯು ರಾಜಕೀಯ ದುರುದ್ದೇಶ ಹಾಗೂ ಕೋಮು ಪ್ರಚೋದನೆಯಿಂದ ಕೂಡಿದೆ. ಇದರ ಹಿಂದೆ ಯಾವುದೇ ಶ್ರದ್ದಾ ಭಕ್ತಿಗಳಿಲ್ಲ ಎಂದು ವೇದಿಕೆಯ ರಾಜ್ಯಾಧ್ಯಕ್ಷ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯಾವುದೇ ಶ್ರದ್ದಾಭಕ್ತಿಗಳಿರದೆ ಕೇವಲ ರಾಜಕೀಯ ದುರುದ್ದೇಶದಿಂದ ದತ್ತನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಮೇಲುನೋಟಕ್ಕೆ ಧಾರ್ಮಿಕವೆಂಬಂತೆ ಬಿಂಬಿಸಲಾಗುತ್ತಿರುವ ಈ ಮೆರವಣಿಗೆಯ ಹಿಂದಿರುವ ಹುನ್ನಾರಗಳನ್ನು ಬಯಲು ಮಾಡಲಿದ್ದೇವೆ ಎಂದು ವೇದಿಕೆಯ ನಗರಿ ಬಾಬಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚೆ.ಗೋ.ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಮತ್ತಷ್ಟು
ನಲುಗುತ್ತಿರುವ ವೀರಶೈವ ಧರ್ಮ:ಅನಂತಮೂರ್ತಿ
ಅಧ್ಯಕ್ಷ ಸ್ಥಾನ: ಕೆಪಿಸಿಸಿ ಗೊಂದಲದ ಗೂಡು
ಸಿದ್ಧರಾಜು ಆತ್ಮಹತ್ಯೆ ತನಿಖೆಗೆ ತಂಡ ರಚನೆ
ವಿದೇಶ ಯಾತ್ರೆ ವಿವಾದ: ವಿಶ್ವೇಶತೀರ್ಥರಿಗೆ ಸವಾಲು
ಶ್ರೀರಾಮ ಸೇನೆಯಿಂದ ಶ್ರೀ ಸತ್ಯದತ್ತ ವ್ರತ
ದತ್ತಜಯಂತಿಗೆ ರಾಜಕೀಯ ಸ್ವರೂಪ ಬೇಕಿಲ್ಲ: ಮುತಾಲಿಕ್