ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಭ್ರಮದ ಬಕ್ರೀದ್ ಆಚರಣೆ
ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ರಾಜ್ಯದೆಲ್ಲೆಡೆ ಇಂದು ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರು, ಬಿಜಾಪುರ ಹಾಗೂ ಬೆಳಗಾವಿ ಕೇಂದ್ರಗಳ ಬೃಹತ್ ಮೈದಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯಗಳನ್ನು ಕೋರಿ ಸಂಭ್ರಮಿಸಿದರು.

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಪಾಲ್ಗೊಂಡಿದ್ದರು. ರಾಜ್ಯದ ಎಲ್ಲ ಕೇಂದ್ರಗಳಲ್ಲೂ ಬಕ್ರೀದ್ ಆಚರಣೆಯ ಜೊತೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಚೇತರಿಕೆಯ ಕುರಿತೂ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಜಮೀರ್ ಈ ಸಂದರ್ಭದಲ್ಲಿ ತಿಳಿಸಿದರು.

ಇಂದು ಚಾಮರಾಜಪೇಟೆಯ ಮೈದಾನದಲ್ಲಿ ಬಕ್ರೀದ್ ಆಚರಣೆ ಇದ್ದ ಪ್ರಯುಕ್ತ ಸಂಚಾರ ದಟ್ಟಣೆ ಹಾಗೂ ಜನದಟ್ಟಣೆ ಹೆಚ್ಚಾಗಿ ಸಮೀಪದ ಮೈಸೂರು ರಸ್ತೆಯಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಟ್ರಾಫಿಕ್ ಜಾಮ್ ಆಗಿ ಜನ ಪರದಾಡಬೇಕಾಗಿ ಬಂತು.

ದೇವೇಗೌಡರ ಕುಟುಂಬದ ಪ್ರಾರ್ಥನೆ

ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರು ಕುಟುಂಬದವರೊಡನೆ ಹಲವು ದೇವಾಲಯಗಳಿಗೆ ತೆರಳಿ ತಮ್ಮ ಪುತ್ರ ಕುಮಾರಸ್ವಾಮಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಮ್ಮ ಪುತ್ರರಾದ ರೇವಣ್ಣ ಹಾಗೂ ಬಾಲಕೃಷ್ಣರೊಂದಿಗೆ ಬೆಳಗ್ಗೆ 9 ಗಂಟೆಗೆ ಶ್ರೀರಂಗಪಟ್ಟಣಕ್ಕೆ ತೆರಳಿದ ದೇವೇಗೌಡರು ಶ್ರೀರಂಗನಾಥ ಸ್ವಾಮಿಗೆ ವಿಶೇಷ ಪ್ರಾರ್ಥನೆ-ಪೂಜೆ ಸಲ್ಲಿಸಿ ನಂತರ ಶಿಂಷಾದ ಮಧ್ಯ ರಂಗನಾಥ ಸ್ವಾಮಿಗೂ ವಿಶೇಷ ಪೂಜೆ ಸಲ್ಲಿಸಿದರು ಎಂದು ಸುದ್ದಿಮೂಲಗಳು ತಿಳಿಸಿವೆ.
ಮತ್ತಷ್ಟು
ಶೋಭಾಯಾತ್ರೆಗೆ ಕೋ. ಸೌ.ವೇದಿಕೆ ಖಂಡನೆ
ನಲುಗುತ್ತಿರುವ ವೀರಶೈವ ಧರ್ಮ:ಅನಂತಮೂರ್ತಿ
ಅಧ್ಯಕ್ಷ ಸ್ಥಾನ: ಕೆಪಿಸಿಸಿ ಗೊಂದಲದ ಗೂಡು
ಸಿದ್ಧರಾಜು ಆತ್ಮಹತ್ಯೆ ತನಿಖೆಗೆ ತಂಡ ರಚನೆ
ವಿದೇಶ ಯಾತ್ರೆ ವಿವಾದ: ವಿಶ್ವೇಶತೀರ್ಥರಿಗೆ ಸವಾಲು
ಶ್ರೀರಾಮ ಸೇನೆಯಿಂದ ಶ್ರೀ ಸತ್ಯದತ್ತ ವ್ರತ