ಬಹು ನೀರೀಕ್ಷಿತ ಶೋಭಾಯಾತ್ರೆಗೆ ಜಿಲ್ಲಾಡಳಿತ ಅನಮತಿ ನೀಡುವುದರ ಜೊತೆಗೆ ದತ್ತ ಜಯಂತಿಗೆ ಸಂಭ್ರಮದ ಚಾಲನೆ ದೊರೆತಿದೆ.ಮಹಿಳೆಯರು ಅನಸೂಯಾದೇವಿಗೆ ನಡೆಸಿದ ಪೂಜೆ, ಶ್ರೀರಾಮ ಸೇನೆಯಿಂದ ದತ್ತ ಪಾದುಕೆಗೆ ಸಲ್ಲಿಸಲಾದ ನಮನ, ಮಾತೆಯರಿಂದ ದತ್ತಾತ್ರೇಯ ಪೀಠದ ದರ್ಶನ ಇವು ಈ ಸಂಭ್ರಮದ ಕೆಲವು ಪ್ರಮುಖ ಅಂಶಗಳಾಗಿದ್ದವು.
ಈ ಸನ್ನಿವೇಶದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದ್ದರೂ ಯಾವುದೇ ಅಹಿತಕರ ಘಟನೆಗಳು ನಡೆಯದೆ ಆಚರಣೆ ಶಾಂತಿಯುತವಾಗಿ ಸಾಗಿದೆ. ಆದರೆ ಯಾವುದೇ ಹೊಸ ಆಚರಣೆಗೆ ಅವಕಾಶ ಕಲ್ಪಿಸದಿರುವುದು ಕಂಡುಬಂದಿದೆ.
350ಕ್ಕೂ ಹೆಚ್ಚು ಮಹಿಳೆಯರು ದತ್ತ ಜಯಂತಿಯ ಆಚರಣೆಯಲ್ಲಿ ಪಾಲ್ಗೊಂಡಿದ್ದು, ಸಂಜೆಯ ವೇಳೆಗೆ ಈ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂಬುದು ಇಲ್ಲಿನ ಸ್ಥಳೀಯರ ಅಭಿಪ್ರಾಯ. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಗಂಗಾಧರ ಕುಲಕರ್ಣಿಯವರ ಉಪಸ್ಥಿತಿ ಮತ್ತೊಂದು ವಿಶೇಷ.
|