ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದರಾಜು ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ
ಐಸಿಐಸಿಐ ಬ್ಯಾಂಕಿನಿಂದ ತೆಗೆದುಕೊಂಡ ಟ್ರ್ಯಾಕ್ಟರ್ ಸಾಲಕ್ಕೆ ಸಂಬಂಧಿಸಿ ಬ್ಯಾಂಕಿನ ಕಿರುಕುಳ ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ಧರಾಜುರವರ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭವಾಗಿದೆ.

ತಾಲ್ಲೂಕಿನ ಹರವೆ ಗ್ರಾಮಸ್ಥರು ಸಿದ್ಧರಾಜುವಿನ ಮೃತದೇಹವನ್ನು ಗ್ರಾಮದ ಮುಖ್ಯರಸ್ತೆಯಲ್ಲಿಟ್ಟು ಪ್ರತಿಭಟನೆ ಆರಂಭಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ಗುರುವಾರ ರಾತ್ರಿ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ ಐಸಿಐಸಿಐ ಬ್ಯಾಂಕಿನ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕೆ.ವಿಶ್ವನಾಥರೆಡ್ಡಿ ಬಂದಿದ್ದರು. ಸಾಲ ಮನ್ನಾದ ಜತೆಗೆ ಒತ್ತೆ ಇಟ್ಟುಕೊಂಡಿರುವ ಜಮೀನು ಪತ್ರಗಳನ್ನು ವಾಪಸು ಮಾಡಬೇಕು ಮತ್ತು ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಗ್ರಾಮದ ರೈತರು ಈ ಸಂದರ್ಭದಲ್ಲಿ ಬೇಡಿಕೆ ಇರಿಸಿದ್ದರು.

ಈ ಕುರಿತು ಮುಂಬೈ ಪ್ರಧಾನ ಕಚೇರಿಯ ಅಧಿಕಾರಿಗಳು ಮಾತ್ರ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದ ಅಧಿಕಾರಿಗಳು ಮಧ್ಯಾಹ್ನ ಗ್ರಾಮಕ್ಕೆ ಅವರನ್ನು ಕರೆತರುವ ಭರವಸೆ ನೀಡಿದ್ದರು. ಇದನ್ನು ನಂಬಿದ ಗ್ರಾಮಸ್ಥರು ಅವರನ್ನು ಜಿಲ್ಲಾಧಿಕಾರಿಗಳೊಂದಿಗೆ ಕಳುಹಿಸಿಕೊಟ್ಟರು.

ಆದರೆ ನಿನ್ನೆ (ಶುಕ್ರವಾರ) ಸಂಜೆಯಾದರೂ ಯಾರೂ ಗ್ರಾಮದೆಡೆಗೆ ಸುಳಿಯದ ಕಾರಣ ಹಾಗೂ ನಂತರ ಹಲವು ನಾಟಕೀಯ ಬೆಳವಣಿಗೆಗಳಿಂದಾಗಿ ರೈತರಿಗೆ ವಿಶ್ವಾಸ ಬರದ ಕಾರಣ ಚಾಮರಾಜನಗರದ ಜಿಲ್ಲಾ ಆಡಳಿತ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಲು ನಿರ್ಧರಿಸಿದ ರೈತರು ಶವವನ್ನು ಟ್ರ್ಯಾಕ್ಟರಿನಲ್ಲಿ ಚಾಮರಾಜನಗರಕ್ಕೆ ಕೊಂಡೊಯ್ಯಲು ಮುಂದಾದರು. ಇವರನ್ನು ಪೊಲೀಸರು ಮುಖ್ಯರಸ್ತೆಯಲ್ಲೇ ತಡೆದಾಗ ರೈತರು ಅಲ್ಲಿಯೇ ಧರಣಿಗೆ ಕುಳಿತರು ಎಂದು ತಿಳಿದುಬಂದಿದೆ.
ಮತ್ತಷ್ಟು
ಶೋಭಾಯಾತ್ರೆಗೆ ಅವಕಾಶ
ಸಂಭ್ರಮದ ಬಕ್ರೀದ್ ಆಚರಣೆ
ಶೋಭಾಯಾತ್ರೆಗೆ ಕೋ. ಸೌ.ವೇದಿಕೆ ಖಂಡನೆ
ನಲುಗುತ್ತಿರುವ ವೀರಶೈವ ಧರ್ಮ:ಅನಂತಮೂರ್ತಿ
ಅಧ್ಯಕ್ಷ ಸ್ಥಾನ: ಕೆಪಿಸಿಸಿ ಗೊಂದಲದ ಗೂಡು
ಸಿದ್ಧರಾಜು ಆತ್ಮಹತ್ಯೆ ತನಿಖೆಗೆ ತಂಡ ರಚನೆ