ಮಲೆನಾಡಿನ ಮಡಿಲೂರು-ಚಿಕ್ಕಮಗಳೂರು ಇಂದು ಅಕ್ಷರಶಃ ಕೇಸರಿಮಯವಾಗಿದೆ. ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆಯೊಂದಿಗ ಶೋಭಾಯಾತ್ರೆ ನಡೆಯುತ್ತಿದ್ದು ಹಲವು ಹನ್ನೊಂದು ಊರುಗಳಿಂದ ಬಂದಿರುವ ಉತ್ಸಾಹಿಗಳಿಂದ ತುಂಬಿದೆ ಈ ಊರು.
ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಈ ಶೋಭಾಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ದೇಶದೆಲ್ಲೆಡೆಯ ಮುಖಂಡರು, ಭಕ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದಲ್ಲಿಯೇ ರಥಯಾತ್ರೆ ಪ್ರಾರಂಭವಾಗಲಿದ್ದು ಈ ಸನ್ನಿವೇಶವನ್ನು ನೆನಪಿನಲ್ಲುಳಿಸಲು ಊರಿನೆಲ್ಲೆಡೆ ಭಗವದ್ ಧ್ವಜ-ಬಂಟಿಂಗ್‌ಗಳನ್ನು ಲಗತ್ತಿಸಲಾಗಿದೆ.
ಶೋಭಾಯಾತ್ರೆಗೆ ಧಾರ್ಮಿಕ-ಸಾಂಸ್ಕ್ಕತಿಕ ಆಯಾಮವನ್ನು ನೀಡುವ ಉದ್ದೇಶದಿಂದ ಸಾಂಸ್ಕ್ಕತಿಕ ಕಲಾತಂಡಗಳಿಗೆ ಈ ಯಾತ್ರೆಯಲ್ಲಿ ಅವಕಾಶ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ಖ್ಯಾತರಾದ ಧಾರ್ಮಿಕ ಮುಖಂಡ ರವೀಶ್ ತಂತ್ರಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವುದು ಮತ್ತೊಂದು ವಿಶೇಷ. ಇವರೊಂದಿಗೆ ಕೇಶವ ಹೆಗಡೆ, ಮಾಜಿ ಸಚಿವ ನಾಗರಾಜ ಶೆಟ್ಟಿ, ಸ್ಥಳೀಯ ಮುಖಂಡರು-ಸ್ವಾಮೀಜಿಗಳು ರಥಯಾತ್ರೆಯ ಅಂಗವಾಗಲಿದ್ದಾರೆ.
ಹಲವು ವರ್ಷಗಳಿಂದ ದತ್ತಪೀಠ ಅಸ್ತಿತ್ವದಲ್ಲಿದ್ದರೂ ಹೋರಾಟದ ಹಾದಿ ಹಿಡಿಯುವ ತನಕ ಅದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಈಗ ದತ್ತಪೀಠದ ಹಕ್ಕನ್ನು ಪಡೆಯಲು ಹೋರಾಟ ನಡೆಸಬೇಕು. ಈ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಬೇಕು ಎಂದು ದೂರದ ಲಕ್ನೊದಿಂದ ಬಂದಿದ್ದ ಕನ್ನಡದ ಧಾರ್ಮಿಕ ಮುಖಂಡರೊಬ್ಬರು ಕರೆ ಕೊಟ್ಟಿದ್ದು ವಿಶೇಷ ಆಕರ್ಷಣೆಯಾಗಿತ್ತು.
|