ಅರುವತ್ತೆರಡುವರೆ ಅಡಿ ಉದ್ದ ಮತ್ತು 20 ಅಡಿ ಎತ್ತರ ಹಾಗೂ ಹತ್ತೊಂಬತ್ತುವರೆ ಅಡಿ ಅಗಲವಿರುವ ಇದು ಬೆಂಗಳೂರು ಅರಮನೆ.
ಅಷ್ಟು ದೊಡ್ಡ ಅರಮನೆಯ ವಿಸ್ತೀರ್ಣ ಇಷ್ಟೆಯಾ ಎಂದು ನಿರ್ಲಕ್ಷಿಸಬೇಡಿ. ಇದು ಕ್ರಿಸ್ಮಸ್‌ಗಾಗಿ ತಯಾರಿಸಿರುವ ಕೇಕ್! ಬೆಂಗಳೂರಿನ ಐತಿಹಾಸಿಕ ಅರಮನೆಯ ಮಾದರಿಯಲ್ಲಿ ಇದನ್ನು ತಯಾರಿಸಲಾಗಿದ್ದು, ನೀಲಗಿರೀಸ್ ಸಂಸ್ಥೆಯ 25 ಮಂದಿ ಕೆಲಸಗಾರರು ಇದಕ್ಕಾಗಿ ಶ್ರಮಿಸಿದ್ದಾರೆ.
ಈ ಕೇಕಿನ ತಯಾರಿಕೆಗೆ 4.5 ಟನ್ ಸಕ್ಕರೆ ಬಳಸಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಕ್ ಪ್ರದರ್ಶನದಲ್ಲಿ ಇದು ಗಮನ ಸೆಳೆಯುತ್ತಿದೆ.
|