ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಷ್ಕಳಂಕ ವ್ಯಕ್ತಿತ್ವದ ಫರ್ನಾಂಡಿಸ್‌ಗೆ ಅಭಿನಂದನೆ
ನಿಷ್ಕಳಂಕ ವ್ಯಕ್ತಿತ್ವದ ರಾಜಕಾರಣಿ ಎಂದೇ ಹೆಸರಾದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್‌ ಅವರಿಗೆ ಜನವರಿ 17ರಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ನೇತೃತ್ವದಲ್ಲಿ ನಾಡಿನ ಕೆಲ ಗಣ್ಯರು ಅಭಿನಂದನಾ ಸಮಿತಿಯನ್ನು ರಚಿಸಿಕೊಂಡಿದ್ದು ಕಾರ್ಮಿಕ ಚಳವಳಿ, ರಾಜಕಾರಣವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಮಾದರಿ ವ್ಯಕ್ತಿತ್ವವನ್ನು ಬಿಂಬಿಸಿರುವ ಜಾರ್ಜ್ ಫರ್ನಾಂಡಿಸ್‌ರವರನ್ನು ಸಮಿತಿ ಗೌರವಿಸಲಿದೆ ಎಂದು ತಿಳಿದುಬಂದಿದೆ.

ದಲೈಲಾಮಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಈ ಸಮಾರಂಭದಲ್ಲಿ ದೇಶದ ಪ್ರಮುಖ ರಾಜಕಾರಣಿಗಳಾದ ಎಚ್.ಡಿ.ದೇವೇಗೌಡ, ಎಲ್.ಕೆ.ಆಡ್ವಾಣಿ, ಡಾ| ಫಾರೂಕ್ ಅಬ್ದುಲ್ಲಾ, ನೀತೀಶ್ ಕುಮಾರ್, ದಿಗ್ವಿಜಯ್ ಸಿಂಗ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಜಾರ್ಜ್ ಅವರ ಪಕ್ಷಾತೀತ, ಸರಳ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಮಾದರಿಯಾಗಿ ಬಿಂಬಿಸುವ ಉದ್ದೇಶವನ್ನು ಒಳಗೊಂಡಿರುವ ಈ ಸಮಾರಂಭದಲ್ಲಿ ದೇಶದ ಕಾರ್ಮಿಕ ಚಳವಳಿಗೆ ಜಾರ್ಜ್ ಫರ್ನಾಂಡಿಸ್ ನೇತೃತ್ವ ನೀಡಿರುವ ಕೊಡುಗೆಗಳ ಬಗೆಗೆ ಎಲ್.ಕೆ.ಆಡ್ವಾಣಿ ಭಾಷಣ ಮಾಡಲಿದ್ದಾರೆ.

ಅಷ್ಟೇ ಅಲ್ಲದೆ, ಜಾರ್ಜ್ ಅವರು ರಕ್ಷಣಾ ಸಚಿವರಾಗಿದ್ದಾಗಿನ ಅವಧಿಯಲ್ಲಿ ನೀಡಿದ ದಕ್ಷ ಆಡಳಿತ, ರಾಜಕೀಯ ಹೊರತುಪಡಿಸಿ ದೇಶದ ಸಾಮಾಜಿಕ-ಆರ್ಥಿಕ ಪ್ರಗತಿಯಲ್ಲಿ ಅವರ ಪಾತ್ರದ ಕುರಿತು ಗಣ್ಯರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಸಿಹಿಯಾದ ಅರಮನೆ!
ಶೋಭಾಯಾತ್ರೆ: ಕೇಸರಿಮಯವಾದ ಮಲೆನಾಡು
ರೈತರ ಆತ್ಮಹತ್ಯೆ ತಡೆಗೆ ರವಿಶಂಕರ್ ಸೂತ್ರ
ಸಿದ್ದರಾಜು ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ
ಶೋಭಾಯಾತ್ರೆಗೆ ಅವಕಾಶ
ಸಂಭ್ರಮದ ಬಕ್ರೀದ್ ಆಚರಣೆ