ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದೂ ಧರ್ಮಕ್ಕೆ ವೇದಗಳೇ ತಳಪಾಯ: ಮೂರ್ತಿ
ಹಿಂದೂ ಧರ್ಮದ ತಳಪಾಯವಾಗಿರುವ ವೇದಗಳಲ್ಲಿ ಶ್ರದ್ದೆ ಇಡುವುದೇ ಹಿಂದೂ ಧರ್ಮದ ಮುಖ್ಯ ಲಕ್ಷಣ ಎಂದು ಖ್ಯಾತ ಸಂಶೋಧಕ ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ವೇದಭಾಷ್ಯ ಪ್ರಕಾಶನ ಸಮಿತಿ ಆಯೋಜಿಸಿದ್ದ ಋುಗ್ವೇದ ಭಾಷ್ಯ (ಭಾಗ-1) ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಸುಪ್ರೀಂ ಕೋರ್ಟ್ ಪೂರ್ಣ ಪೀಠ ಸಹಾ ವೇದವೇ ಹಿಂದೂ ಧರ್ಮದ ಅಡಿಪಾಯ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ನುಡಿದರು.

ಮುಸ್ಲಿಮರಿಗೆ ಅನ್ಯಾಯವಾದರೆ ಅವರ ಪರ ನಿಲ್ಲುವ ಪ್ರಗತಿಪರರು ಹಿಂದೂಗಳಿಗೆ ಅನ್ಯಾಯವಾದರೆ ಸುಮ್ಮನಿರುತ್ತಾರೆ; ಇದೆಂಥಾ ಪ್ರಗತಿಪರ ವಾದ? ಎಂದು ಪ್ರಶ್ನಿಸಿದ ಚಿದಾನಂದ ಮೂರ್ತಿಯವರು ಮತಾಂತರದ ಮೂಲಕ ಕ್ರೈಸ್ತ ಪಾದ್ರಿಗಳು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುತ್ತಿದ್ದು ಹಣದ ಆಮಿಷವನ್ನೂ ಒಡ್ಡುತ್ತಿದ್ದಾರೆ. ಇನ್ನೊಂದೆಡೆ ಇಸ್ಲಾಂ ಜಗತ್ತಿನ ಉಗ್ರಗಾಮಿಗಳಿಂದಲೂ ಹಿಂದೂ ಧರ್ಮಕ್ಕೆ ಅಪಾಯ ಎದುರಾಗಿದೆ ಎಂದು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಸಮಾಜದಲ್ಲಿರುವ ಮೇಲು-ಕೀಳು ಭಾವವನ್ನು ತೊರೆದು ಎಲ್ಲಾ ಹಿಂದೂಗಳೂ ಒಗ್ಗಟ್ಟು ಪ್ರದರ್ಶಿಸಬೇಕಿದೆ, ಹಿಂದೂ ಧರ್ಮದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಅವರು ಕರೆಕೊಟ್ಟರು.
ಮತ್ತಷ್ಟು
ನಿಷ್ಕಳಂಕ ವ್ಯಕ್ತಿತ್ವದ ಫರ್ನಾಂಡಿಸ್‌ಗೆ ಅಭಿನಂದನೆ
ಸಿಹಿಯಾದ ಅರಮನೆ!
ಶೋಭಾಯಾತ್ರೆ: ಕೇಸರಿಮಯವಾದ ಮಲೆನಾಡು
ರೈತರ ಆತ್ಮಹತ್ಯೆ ತಡೆಗೆ ರವಿಶಂಕರ್ ಸೂತ್ರ
ಸಿದ್ದರಾಜು ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ
ಶೋಭಾಯಾತ್ರೆಗೆ ಅವಕಾಶ