ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಸ್ತ್ತ್ರೀಯ ಸ್ಥಾನಮಾನ: ಸಂಸದರ ವಿರುದ್ಧ ಆರೋಪ
ಕನ್ನಡ ಭಾಷೆಗೆ ಶಾಸ್ತ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ನಾಗರಾಜ ನೀರಗುಂದ ಆರೋಪಿಸಿದ್ದಾರೆ.

ಇಲ್ಲಿನ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ನಮ್ಮ ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ನಮ್ಮ ಸಂಸದರು ಹೋರಾಟಕ್ಕೆ ಮುಂದಾಗಿದ್ದರೆ ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ ಅಂದೇ ಸಿಗುತ್ತಿತ್ತು ಎಂದು ನುಡಿದರು.

ಸಮಾರಂಭ ಉದ್ಘಾಟಿಸಿದ ಬ್ಯಾಂಕಿನ ಸ್ಥಾಪಕ ಅಧ್ಯಕ್ಷ ಬಿ.ಆರ್.ಅಬ್ಳಿಯವರು ಮಾತನಾಡುತ್ತಾ, ನಾಡು-ನುಡಿ ಮಾತ್ರವಲ್ಲದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕನ್ನಡಿಗರೂ ಜಾಗೃತರಾಗುವ ಅನಿವಾರ್ಯತೆ ಕಂಡುಬಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬ್ಯಾಂಕ್ ಅಧ್ಯಕ್ಷ ರಾಮಚಂದ್ರು ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಕಲಾವಿದ ಚಿಕ್ಕಮರಿಗೌಡ, ರಂಗ ಕಲಾವಿದ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ವಿವಿಧ ಸಾಂಸ್ಕ್ಕತಿಕ ಕಾರ್ಯಕ್ರಮಗಳು ಹಾಗೂ ರಂಗ ಸಂಗೀತ ಈ ಕಾರ್ಯಕ್ರಮಕ್ಕೆ ವಿಶೇಷ ಕಳೆ ಕೊಟ್ಟವು.
ಮತ್ತಷ್ಟು
ಹಿಂದೂ ಧರ್ಮಕ್ಕೆ ವೇದಗಳೇ ತಳಪಾಯ: ಮೂರ್ತಿ
ನಿಷ್ಕಳಂಕ ವ್ಯಕ್ತಿತ್ವದ ಫರ್ನಾಂಡಿಸ್‌ಗೆ ಅಭಿನಂದನೆ
ಸಿಹಿಯಾದ ಅರಮನೆ!
ಶೋಭಾಯಾತ್ರೆ: ಕೇಸರಿಮಯವಾದ ಮಲೆನಾಡು
ರೈತರ ಆತ್ಮಹತ್ಯೆ ತಡೆಗೆ ರವಿಶಂಕರ್ ಸೂತ್ರ
ಸಿದ್ದರಾಜು ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ