ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ: ಧರಂ
PTI
ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟು ಬಹುಜನ ಸಮಾಜವಾದಿ ಪಕ್ಷಕ್ಕೆ ಸೇರುವ ವಿಷಯ ಕೇವಲ ವದಂತಿ ಮತ್ತು ಮಾಧ್ಯಮಗಳು ಸೃಷ್ಟಿಸಿರುವ ಗೊಂದಲ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನಮ್ಮ ಪಕ್ಷದಲ್ಲಿ ಅತೃಪ್ತಿ, ಭಿನ್ನಾಭಿಪ್ರಾಯ ಮತ್ತು ಗುಂಪುಗಾರಿಕೆಗೆ ಆಸ್ಪದವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರವೇ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಉತ್ತರ ಪ್ರದೇಶಕ್ಕೂ, ಕರ್ನಾಟಕಕ್ಕೂ ವ್ಯತ್ಯಾಸವಿದೆ. ಅಲ್ಲಿಯ ಓಟ್‌ ಬ್ಯಾಂಕ್‌ನಂತೆ ಇಲ್ಲಿನದು ಇಲ್ಲ. ಹಾಗಾಗಿ ರಾಜ್ಯದಲ್ಲಿ ಬಿಎಸ್ಪಿಗೆ ಅಂಥ ಭವಿಷ್ಯ ಇಲ್ಲ ಎಂದು ಬಿಎಸ್‌ಪಿ ರಾಜ್ಯಕ್ಕೆ ಲಗ್ಗೆಹಾಕುತ್ತಿರುವ ಬಗ್ಗೆ ನುಡಿದ ಧರಂ, ಸಿದ್ರಾಮಯ್ಯನವರಿಗೆ ಅಸಮಾಧಾನವಾಗುವಂತಹ ಯಾವುದೇ ಘಟನೆಗಳು ನಡೆದಿಲ್ಲ. ಪಕ್ಷದಲ್ಲಿ ಇರುವ ಅಥವಾ ಹೋಗುವ ವಿಚಾರ ಅವರವರ ವಿವೇಚನೆಗೆ ಬಿಟ್ಟದ್ದು ಎಂದು ನುಡಿದರು.

ಅನುಕಂಪದ ಆಧಾರದ ಮೇಲೆ ಬಿಜೆಪಿ ಅಧಿಕಾರ ಹಿಡಿಯುತ್ತದೆಯೇ ಎಂಬ ಪ್ರಶ್ನೆಗೆ, ಅವರ ಬಗ್ಗೆ ರಾಜ್ಯದಲ್ಲಿ ಯಾರಿಗೂ ಅನುಕಂಪವಿಲ್ಲ. ಕಾಂಗ್ರೆಸ್ ಪಕ್ಷವೇ ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ ಎಂದು ಉತ್ತರಿಸಿದರು.
ಮತ್ತಷ್ಟು
ಆಂಧ್ರ ವಿ.ವಿ.ಯೊಂದಿಗೆ ವಿಪ್ರೊ ಒಪ್ಪಂದ
ಶಾಸ್ತ್ತ್ರೀಯ ಸ್ಥಾನಮಾನ: ಸಂಸದರ ವಿರುದ್ಧ ಆರೋಪ
ಹಿಂದೂ ಧರ್ಮಕ್ಕೆ ವೇದಗಳೇ ತಳಪಾಯ: ಮೂರ್ತಿ
ನಿಷ್ಕಳಂಕ ವ್ಯಕ್ತಿತ್ವದ ಫರ್ನಾಂಡಿಸ್‌ಗೆ ಅಭಿನಂದನೆ
ಸಿಹಿಯಾದ ಅರಮನೆ!
ಶೋಭಾಯಾತ್ರೆ: ಕೇಸರಿಮಯವಾದ ಮಲೆನಾಡು