ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಪರ್ ಫಾಸ್ಟ್ ರೈಲು ಆರಂಭಿಸಲು ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದ ಸಮಿತಿ ನಿರ್ಧರಿಸಿದೆ.
3.75 ಕೋಟಿ ರೂ ವೆಚ್ಚದ ಈ ಬೃಹತ್ ಯೋಜನೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಹರಿಸಲಿದೆ. ಈ ರೈಲು ಮಾರ್ಗದ ಒಟ್ಟು ಉದ್ದ 34 ಕಿಲೋ ಮೀಟರ್ ಆಗಿದ್ದು, 3716 ಕೋಟಿ ವೆಚ್ಚವಾಗಲಿದೆ.
ಈ ರೈಲು ಯೋಜನೆಗೆ 13.20 ಹೆಕ್ಟೇರ್ ಸರ್ಕಾರಿ ಹಾಗೂ 28.65 ಹೆಕ್ಟೇರ್ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು. 2008ರ ಅಂತ್ಯದೊಳಗೆ ಯೋಜನೆ ಪ್ರಾರಂಭವಾಗು ಸಾಧ್ಯತೆ ಇದೆ.
ಹೆಬ್ಬಾಳ ಹಾಗೂ ಯಲಹಂಕದಲ್ಲಿ ಎರಡು ರೈಲ್ವೇ ನಿಲ್ದಾಣಗನಳನ್ನು ಸ್ಥಾಪಿಸಲಾಗುವುದು. ಟ್ಯಾಕ್ಸಿ ದರಕ್ಕೆ ಹೋಲಿಸಿದರೆ ಪ್ರಯಾಣದರ ಅಲ್ಪ ವೆಚ್ಚದ್ದು, ವಿದ್ಯುತ್ ಚಾಲಿತ ರೈಲು ಸೇವೆಯಾಗಿರುವ ಕಾರಣ ಪರಿಸರ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.
|