ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯ ಸಂಚಲನ ಸೃಷ್ಟಿಸಿದ ಬಿಎಸ್ಪಿ "ಆನೆ"
ಬೆಂಗಳೂರಿನಲ್ಲಿ ಭಾನುವಾರ ನಡೆದ ಬಿಎಸ್ಪಿ ಸಮಾವೇಶ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ಯಾವುದೇ ಜಾತಿ ಇಲ್ಲವೇ ಧರ್ಮಕ್ಕೆ ಬಿಎಸ್ಪಿ ಜೋತುಬಿದ್ದಿಲ್ಲ ಎಂಬ ಮಾತಿಗೆ ಒತ್ತು ನೀಡಿರುವುದು ಈ ಸಂಚಲನಕ್ಕೆ ಕಾರಣವಾಗಿದೆ.

ನಿನ್ನೆ ನಡೆದ ಸಮಾವೇಶದಲ್ಲಿ ಮಾಜಿ ಸಚಿವ ಸಿಂಧ್ಯಾರವರು ಬಿಎಸ್ಪಿ ಸೇರ್ಪಡೆಯಾದ ಕೆಲ ಸಮಯದಲ್ಲಿಯೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಗಳಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಗೋಪಾಲ್‌ಗೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಬಡ್ತಿ ನೀಡಿರುವುದು ರಾಜ್ಯದ ಹಲವು ನಾಯಕರ ಗಮನ ಸೆಳೆದಿದೆ.

ಬಿಎಸ್ಪಿ ಸೇರುವಂತೆ ಮಾಜಿ ಸಚಿವ ಎಂ.ಪಿ.ಪ್ರಕಾಶ್‌ಗೆ ಮೊದಲಿನಿಂದಲೂ ಒತ್ತಾಯ ಬಂದಿದೆ. ಅದರೆ ಈ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಹತ್ತಿರಕ್ಕೆ ಬಂದಿದೆಯೇ ಎಂಬುದಿನ್ನೂ ಪ್ರಕಾಶ್‌ಗೆ ಸ್ಪಷ್ಟವಾಗಿಲ್ಲವಾದ್ದರಿಂದ ಅವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲ ರಾಜಕೀಯ ಪಕ್ಷಗಳೂ ಅಲ್ಪಸಂಖ್ಯಾತರ ಹಿತ ಕಾಯುವ ಮಾತುಗಳನ್ನಾಡುತ್ತಿದ್ದರೆ, ಎಲ್ಲರೊಡಗೂಡಿ ಪಕ್ಷ ಕಟ್ಟುವ ಮಾತುಗಳನ್ನಾಡುತ್ತಿರುವುದು ಮಾಯಾವತಿಯವರ ಪ್ಲಸ್ ಪಾಯಿಂಟ್ ಆಗಿದೆ. ಉತ್ತರ ಪ್ರದೇಶದಲ್ಲಿ ಬೀಸಿದ ಗಾಳಿ ಕರ್ನಾಟಕದಲ್ಲೂ ಬೀಸುವುದೇ ಎಂದು ಕಾದು ನೋಡಬೇಕಿದೆ ಎನ್ನುತ್ತದೆ ವಲಸೆಗೆ ಸಿದ್ಧವಿರುವ ಕಾರ್ಯಕರ್ತರ ಗುಂಪು.
ಮತ್ತಷ್ಟು
ರಾಜ್ಯ ಕಾಂಗ್ರೆಸಿನಲ್ಲೂ ಎಲ್ಲವೂ ಸರಿ ಇಲ್ಲ...
ದೇವನಹಳ್ಳಿ ಅಂ.ವಿಗೆ ಸುಪರ್ ಫಾಸ್ಟ್ ರೈಲು
ಉದ್ಯಾನ ನಗರಿಗೆ ಉತ್ತರ ಪ್ರದೇಶದ ಮಾಯಾವತಿ
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಎಂವಿಆರ್
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲ: ಧರಂ
ಆಂಧ್ರ ವಿ.ವಿ.ಯೊಂದಿಗೆ ವಿಪ್ರೊ ಒಪ್ಪಂದ