ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಳೆನರಸೀಪುರದಲ್ಲಿಂದು ಕನಕ ಸಮಾವೇಶ
PTI
ಜಿಲ್ಲೆಯ ಹೊಳೆನರಸೀಪುರದಲ್ಲಿಂದು ನಡೆಯಲಿರುವ ಕುರುಬ ಸಮುದಾಯದ ಕನಕ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.ಮಾಜಿ ಸಚಿವ ಎಚ್.ಡಿ.ರೇವಣ್ಣನವರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಮಾಜಿ ಉಪ ಮುಖ್ಯಮಂತ್ರಿ ಸಿದ್ರಾಮಯ್ಯ ಅಗಮಿಸಲಿರುವುದು ಪ್ರಮುಖ ಆಕರ್ಷಣೆಯಾಗಿರುವುದಲ್ಲದೆ ಶಾಂತಿ ಕಾಪಾಡುವ ದೃಷ್ಟಿಯಿಂದಲೂ ಆರಕ್ಷಕರಿಗೆ ಸವಾಲೆಸೆದಿದೆ.

ಕಾರಣ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆದಲ್ಲಿ ಅದರಿಂದುಂಟಾಗುವ ಪರಿಣಾಮಗಳಿಗೆ ನಾವು ಜವಾಬ್ದಾರರಲ್ಲ ಎಂಬ ಸಂದೇಶ ಜೆಡಿಎಸ್ ವಲಯದಿಂದ ರವಾನೆಯಾಗಿದೆ. ಆದರೆ ಯಾವುದೇ ಸಾರ್ವಜನಿಕ ಸಭೆಯಲ್ಲಿ ಸಿದ್ರಾಮಯ್ಯನವರು ಜೆಡಿಎಸ್ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಿನ್ನೆಲೆಯಲ್ಲಿ ಸದರಿ ಸಮಾವೇಶ ರಾಜಕೀಯ ಪ್ರತಿಷ್ಠೆಗಳನ್ನು ಬಿಂಬಿಸುವ ವೇದಿಕೆಯಾಗಲಿದೆ.

ಇಲ್ಲೂ ಸಹ ಸಿದ್ರಾಮಯ್ಯನವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಹಿಂದೆ ಇಲ್ಲಿ ಅಹಿಂದ ಸಮಾವೇಶ ನಡೆದಾಗಲೂ ಸಿದ್ರಾಮಯ್ಯನವರಿಗೆ ಅಭೂತಪೂರ್ವ ಸ್ವಾಗತ ನೀಡಲಾಗಿತ್ತು. ನಿನ್ನೆ ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಮಾವೇಶದಲ್ಲಿ ಸಿದ್ದು ತಮ್ಮ ಆಕ್ರಮಣಕಾರಿ ಶೈಲಿಯನ್ನು ತೋರಿಸಿಕೊಟ್ಟಿದ್ದರು. ಈ ಎಲ್ಲ ಅಂಶಗಳೂ ಶಾಂತಿ ಕಾಪಾಡುವುದಕ್ಕೆ ಸಂಬಂಧಿಸಿ ಪೊಲೀಸರಿಗೆ ಸವಾಲೊಡ್ಡಿದೆ.

ಎಲ್ಲ ರೀತಿಯ ಭಿನ್ನಾಭಿಪ್ರಾಯಗಳೂ ಅಂತಿಮವಾಗಿ ಜಾತಿಯ ಲೇಪದೊಂದಿಗೆ ಅಂತ್ಯಗೊಳ್ಳುತ್ತಿರುವುದರಿಂದ ಇಲ್ಲಿನ ಕನಕ ಸಮಾವೇಶ ಯಾವ ಸಂದೇಶವನ್ನು ಹೊರಹೊಮಿಸಲಿದೆ ಎಂಬುದನ್ನು ಕಾದನೊಡಬೇಕಾಗಿದೆ.
ಮತ್ತಷ್ಟು
ಪಕ್ಷದೊಳಗಿನ ಭಿನ್ನಮತ: ಖರ್ಗೆಯವರಿಂದ ಸುತ್ತೋಲೆ
ಹನೀಫ್ ಆಸ್ಟ್ರೇಲಿಯಕ್ಕೆ ಮರಳುವ ಸಾಧ್ಯತೆ
ಬಿಜೆಪಿಯತ್ತ ಎಂ.ಪಿ. ಪ್ರಕಾಶ್ ಚಿತ್ತ
ರಾಜಕೀಯ ಸಂಚಲನ ಸೃಷ್ಟಿಸಿದ ಬಿಎಸ್ಪಿ "ಆನೆ"
ರಾಜ್ಯ ಕಾಂಗ್ರೆಸಿನಲ್ಲೂ ಎಲ್ಲವೂ ಸರಿ ಇಲ್ಲ...
ದೇವನಹಳ್ಳಿ ಅಂ.ವಿಗೆ ಸುಪರ್ ಫಾಸ್ಟ್ ರೈಲು