ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂರು ಸುವಿಹಾರಿ ಬಸ್‌ಗಳು ಸುಟ್ಟುಹೋಗಿವೆ.ಶಾಂತಿನಗರದ 2ನೇ ಡಿಪೋದಲ್ಲಿ ಈ ಘಟನೆ ಸಂಭವಿಸಿದ್ದು, ಒಂದು ಲಕ್ಷುರಿ ಹಾಗೂ ಎರಡು ರಾಜಹಂಸ ಬಸ್‌ಗಳು ಸುಟ್ಟು ಹೋಗಿದ್ದರಿಂದಾಗಿ ಸಂಸ್ಥೆಗೆ ಸುಮಾರು 25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶಾರ್ಟ್ ಸರ್ಕ್ಯೂಟಿನಿಂದ ಮೊದಲು ಲಕ್ಷುರಿ ಬಸ್ಸಿನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಎರಡು ಬಸ್‌ಗಳಿಗೂ ವ್ಯಾಪಿಸಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಪ್ರಯತ್ನ ನಡೆಸಿತು ಎಂದು ಡಿಪೋದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಈ ಡಿಪೋದಲ್ಲಿನ ಬಸ್ ಒಂದು ಬೆಂಕಿಗೆ ಆಹುತಿಯಾಗಿ ಸುಮಾರು 10 ಲಕ್ಷ ರೂ.ನಷ್ಟ ಸಂಭವಿಸಿತ್ತು. ಈಗ ಮತ್ತೊಂದು ದುರಂತ ಸಂಭವಿಸಿದ್ದು ಡಿಪೋದಲ್ಲಿನ ಸುರಕ್ಷತೆಯ ಬಗ್ಗೆ ಅನುಮಾನ ಮೂಡಿಸಿದೆ.
|