ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೇಜಾವರರ ವಾದ ಒಪ್ಪಲು ಸಿದ್ದನಿಲ್ಲ: ಪುತ್ತಿಗೆ ಶ್ರೀ
ಭಾರತ ಕರ್ಮಭೂಮಿ, ವಿದೇಶಗಳು ಭೋಗಭೂಮಿ. ಭೋಗಭೂಮಿಯನ್ನು ಪ್ರವೇಶಿಸಿದವರು ಶ್ರೀಕೃಷ್ಣ ಪೂಜೆಯನ್ನು ಮಾಡಲು ಅನರ್ಹರು ಎಂಬ ಪೇಜಾವರ ಶ್ರೀಗಳ ವಾದವನ್ನು ಒಪ್ಪಲು ತಾವು ಸಿದ್ದರಿಲ್ಲ ಎಂದು ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದ್ದಾರೆ.

ಪುತ್ತಿಗೆ ಪರ್ಯಾಯಕ್ಕೆ ಸಂಬಂಧಿಸಿದ ವಿವಾದಗಳ ಕುರಿತು ವಿವರಗಳನ್ನು ನೀಡಲು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಷ್ಟ ಮಠಗಳಲ್ಲಿ ಯಾವುದೇ ಸಂವಿಧಾನ ಇಲ್ಲ; ಜೊತೆಗೆ ತಮ್ಮ ಅಭಿಪ್ರಾಯಕ್ಕೆ ಯಾವುದೇ ಮಾನ್ಯತೆ ಸಿಗುತ್ತಿಲ್ಲ ಎಂಬ ಅಂಶವನ್ನು ಹೊರಗೆಡವಿದರು.

ಇಡೀ ಭೂಮಿಯೇ ಕರ್ಮಭೂಮಿ, ಹಾಗಾಗಿ ವಿದೇಶದ ಭೂಮಿ ಅಪವಿತ್ರವಲ್ಲ. ಆದ್ದರಿಂದ ಪರ್ಯಾಯ ನಡೆಸಿಯೇ ಸಿದ್ಧ, ಶ್ರೀಕೃಷ್ಣನ ಪೂಜೆ ಮಾಡಿಯೇ ಸಿದ್ಧ ಎಂದು ಪುನರುಚ್ಚರಿಸಿದ ಅವರು ಪರ್ಯಾಯದ ಸಮಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುವುದೋ ಇಲ್ಲವೋ ಎಂಬ ಕುರಿತು ಶ್ರೀಕೃಷ್ಣನಷ್ಟೇ ಹೇಳಬಲ್ಲ ಎಂದು ಪ್ರತಿಕ್ರಿಯಿಸಿದರು.

ಇದೇ ತಿಂಗಳ 28ರಂದು ತಾವು ಉಡುಪಿಯ ಪುರಪ್ರವೇಶ ಮಾಡಲಿದ್ದು, ಆ ಸಂದರ್ಭದಲ್ಲಿ ಭಕ್ತರ ಪಾಲ್ಗೊಳ್ಳುವಿಕೆ, ಸಾರ್ವಜನಿಕರ ಪ್ರತಿಕ್ರಿಯೆ ಇವುಗಳನ್ನು ಆಧರಿಸಿ ಪರ್ಯಾಯದ ಸಂಭ್ರಮವನ್ನು ಎದುರು ನೋಡಬಹುದಾಗಿದೆ ಎಂದು ನುಡಿದ ಶ್ರೀಗಳು, ಒಂದು ವೇಳೆ ತಮ್ಮ ಪರ್ಯಾಯಕ್ಕೆ ಅವಕಾಶ ಕೊಡದಿದ್ದರೆ ಅದು ಸಂಪ್ರದಾಯ ಮುರಿದಂತಾಗುತ್ತದೆ ಎಂದೂ ನುಡಿದಿದ್ದಾರೆ.
ಮತ್ತಷ್ಟು
ಸಾರಿಗೆ ಸಂಸ್ಥೆಯ 3 ಬಸ್ಸುಗಳು ಬೆಂಕಿಗಾಹುತಿ
ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಚಾಲನೆ
ಹೊಳೆನರಸೀಪುರದಲ್ಲಿಂದು ಕನಕ ಸಮಾವೇಶ
ಪಕ್ಷದೊಳಗಿನ ಭಿನ್ನಮತ: ಖರ್ಗೆಯವರಿಂದ ಸುತ್ತೋಲೆ
ಹನೀಫ್ ಆಸ್ಟ್ರೇಲಿಯಕ್ಕೆ ಮರಳುವ ಸಾಧ್ಯತೆ
ಬಿಜೆಪಿಯತ್ತ ಎಂ.ಪಿ. ಪ್ರಕಾಶ್ ಚಿತ್ತ