ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿಗೆ ಐಸಿಯುನಿಂದ ಸಾಮಾನ್ಯ ವಾರ್ಡ್
PTI
ಕೆಲ ದಿನಗಳ ಹಿಂದೆ ತೆರೆದ ಹೃದಯದ ಶಸ್ತ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗುಣಮುಖರಾಗುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ವೊಕ್ಹಾರ್ಟ್ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುವ ಹೊಣೆ ಹೊತ್ತಿರುವ ವೈದ್ಯ ಡಾ| ವಿವೇಕ್ ಜವಳಿ ಹಾಗೂ ಆಸ್ಪತ್ರೆಯ ಮುಖ್ಯಸ್ಥ ವಿಶಾಲ್ ಬಾಲಿ ಈ ಕುರಿತು ಮಾತನಾಡುತ್ತಾ, ಅವರ ದೇಹಸ್ಥಿತಿ ಈಗ ಉತ್ತಮವಾಗಿದೆ. ಅವರಿಗೆ ದ್ರವಾಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಗೊಂಡ ನಂತರವೂ ಒಂದು ವಾರದ ತನಕ ಅವರು ಆಸ್ಪತ್ರೆಯಲ್ಲೇ ಇರಬೇಕಿದ್ದು, ಡಿಸ್ಚಾರ್ಜ್ ಆದ ನಂತರ ಸುಮಾರು ಒಂದು ತಿಂಗಳ ನಂತರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಪೇಜಾವರರ ವಾದ ಒಪ್ಪಲು ಸಿದ್ದನಿಲ್ಲ: ಪುತ್ತಿಗೆ ಶ್ರೀ
ಸಾರಿಗೆ ಸಂಸ್ಥೆಯ 3 ಬಸ್ಸುಗಳು ಬೆಂಕಿಗಾಹುತಿ
ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಚಾಲನೆ
ಹೊಳೆನರಸೀಪುರದಲ್ಲಿಂದು ಕನಕ ಸಮಾವೇಶ
ಪಕ್ಷದೊಳಗಿನ ಭಿನ್ನಮತ: ಖರ್ಗೆಯವರಿಂದ ಸುತ್ತೋಲೆ
ಹನೀಫ್ ಆಸ್ಟ್ರೇಲಿಯಕ್ಕೆ ಮರಳುವ ಸಾಧ್ಯತೆ