ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅವಹೇಳನಕಾರಿ ಗೀತೆ ವಿರೋಧಿಸಿ ಪ್ರತಿಭಟನೆ
ಬಹು ನೀರೀಕ್ಷೆಯ ಹಾಗೂ ಬಹು ವೆಚ್ಚದ ಪ್ರೀತಿ ಏಕೆ ಭೂಮಿ ಮೇಲಿದೆ ಚಲನಚಿತ್ರವು ಬರುವ ಶುಕ್ರವಾರ ಬಿಡುಗಡೆಯಾಗಲಿದ್ದು, ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಅಶ್ವಿನಿ ಆಡಿಯೋ ಸಂಸ್ಥೆಯವರು ನಿರ್ಮಿಸಿರುವ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಶ್ರೀರಾಮ, ರಾಮಾಯಣ ಮತ್ತು ಮಹಾಭಾರತವನ್ನು ಕುರಿತು ಅವಹೇಳನಕಾರಿ ಗೀತೆಗಳನ್ನು ಸೇರಿಸಲಾಗಿದೆ ಎಂದು ಶ್ರೀರಾಮ ಸೇನಾ ಆರೋಪಿಸಿದೆ.

ಇದನ್ನು ವಿರೋಧಿಸಿ ವಿಜಯನಗರದಲ್ಲಿರುವ ಅಶ್ವಿನಿ ಅಡಿಯೋ ಸಂಸ್ಥೆಗೆ ಶ್ರೀರಾಮ ಸೇನಾ ವತಿಯಿಂದ ಮುತ್ತಿಗೆ ಹಾಕಲಿದ್ದು, ಅವಹೇಳನಕಾರಿ ಗೀತೆಗಳ ಕುರಿತು ಸೂಕ್ತ ಸ್ಪಷ್ಟೀಕರಣವನ್ನು ನೀಡದಿದ್ದರೆ ರಾಜ್ಯಾದ್ಯಂತ ಚಿತ್ರದ ಬಿಡುಗಡೆಗೆ ತಡೆಯೊಡ್ಡಲಾಗುವುದು ಎಂದು ಶ್ರೀರಾಮಸೇನಾ ಎಚ್ಚರಿಸಿದೆ.

ನಿರ್ದೇಶಕ ಪ್ರೇಮ್ ನಾಯಕರಾಗಿ ಮೊದಲಬಾರಿಗೆ ನಟಿಸುತ್ತಿರುವ ಈ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ವಿಶೇಷ ನೃತ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮತ್ತಷ್ಟು
ಕುಮಾರಸ್ವಾಮಿಗೆ ಐಸಿಯುನಿಂದ ಸಾಮಾನ್ಯ ವಾರ್ಡ್
ಪೇಜಾವರರ ವಾದ ಒಪ್ಪಲು ಸಿದ್ದನಿಲ್ಲ: ಪುತ್ತಿಗೆ ಶ್ರೀ
ಸಾರಿಗೆ ಸಂಸ್ಥೆಯ 3 ಬಸ್ಸುಗಳು ಬೆಂಕಿಗಾಹುತಿ
ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಚಾಲನೆ
ಹೊಳೆನರಸೀಪುರದಲ್ಲಿಂದು ಕನಕ ಸಮಾವೇಶ
ಪಕ್ಷದೊಳಗಿನ ಭಿನ್ನಮತ: ಖರ್ಗೆಯವರಿಂದ ಸುತ್ತೋಲೆ