ದೇವಗೌಡರ ವಿಶ್ವಾಸ ದ್ರೌಹ, ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕುವ ಸಂಸ್ಕ್ಕತಿಯವರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೊಪಿಸಿದ್ದಾರೆ.
ಇಲ್ಲಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಯಾತ್ರೆಯಲ್ಲಿ ಮಾತನಾಡಿ, ತಮ್ಮ ಸ್ವಾರ್ಥಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣೆಯ ಹೊರೆ ತಂದಿದೆ. ಜೆಡಿಎಸ್ ವಿಶ್ವಾಸ ದ್ರೌಹದಿಂದಾಗಿ ನಾವು ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದರ ಬಗ್ಗೆ ಚಿಂತೆಯಿಲ್ಲ. ತಾನು ಹಣಕಾಸು ಸಚಿವನಾಗಿದ್ದಾಗ ಕೈಗೊಂಡ ಅನೇಕ ಯೋಜನೆಗಳು ಮುಂದಿನ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ ಎಂದು ಅವರು ತಿಳಿಸಿದರು.
ರಾಷ್ಟ್ತ್ರಪತಿ ಆಳ್ವಿಕೆಯ ಬದಲು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ರಾಜ್ಯಪಾಲರ ಆಡಳಿತದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಕುಂಭಕರ್ಣ ನಿದ್ದೆಗೊಳಗಾಗಿರುವುದರಿಂದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸುಪ್ರೀಂಕೋರ್ಟ್ ತೀರ್ಮಾನದಂತೆ ಶೀಘ್ರ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ವೇದಿಕೆಯಲ್ಲಿ ಮಾತನಾಡಿದ, ವಿಧಾನ ಪರಿಷತ್ ಸದಸ್ಯ ಜನಾರ್ದನ ರೆಡ್ಡಿ ದೇವೆಗೌಡ, ಮತ್ತು ಅವರ ಮಕ್ಕಳು ರಾಜ್ಯದ ಡಕಾಯಿತರು. ಅವರು ನಿಜವಾಗಿಯೂ ಮಣ್ಣಿನ ಮಕ್ಕಳಲ್ಲ. ಕಳ್ಳಮಕ್ಕಳು ಎಂದು ನಿಂದಿಸಿದರು. ಇಡೀ ರಾಜ್ಯವನ್ನೇ ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಲು ಹೊರಟಿದ್ದಾರೆ. ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ಅಧಿಕಾರ ನೀಡುವಾಗ ಕಂತ್ರಿ ಬುದ್ದಿ ಉಪಯೋಗಿಸಿದವರು ಮುಂದೆ ಸರ್ವನಾಶವಾಗುತ್ತಾರೆ ಎಂದು ಕಿಡಿಕಾರಿದರು.
|