ಸಮ್ಮಿಶ್ರ ಸರ್ಕಾರ ಹೊರನೊಟಕ್ಕೆ ಸುಭದ್ರವಾಗಿ ಕಂಡುಬಂದರೂ ಒಳಪದರದಲ್ಲಿ ಹುಳುಕುಗಳೇ ತುಂಬಿವೆ. ಜನರ ಏಳಿಗೆಗಿಂತ ಅಧಿಕಾರ ಪಡೆಯುವುದೇ ಅವುಗಳ ಮೂಲ ಧ್ಯೇಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕಾನೂನು ಶಾಸ್ತ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಕೆ.ಎನ್.ರಾಜ ಅವರು ಆಪಾದಿಸಿದ್ದಾರೆ.
ಗಾಂಧಿ ಪ್ರತಿಷ್ಠಾನ ಹಾಗೂ ವೂಡೇ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಡಬ್ಲೂ.ಎಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಲಿಸಮ್ಮಿಶ್ರ ಸರ್ಕಾರಗಳು ಹಾಗೂ ಭಾರತದ ಸಂವಿಧಾನಳಿ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.
ರಾಜ್ಯಪಾಲರು ರಾಜಕಾರಣಿಗಳಂತೆ ವರ್ತಿಸಲು ಹಾಗೂ ಸಂವಿಧಾನತ್ಮಕ ನಿಯಮಗಳನ್ನು ದಾಟಿ ಅಧಿಕಾರ ಚಲಾಯಿಸುವಂತೆ ಮಾಡುವಲ್ಲಿ ಸಮ್ಮಿಶ್ರ ಸರಕಾರಗಳು ತಮಗೆ ಗೊತ್ತಿಲ್ಲದೆ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸರ್ಕಾರಗಳ ರಚನೆಯಿಂದ ರಾಜಕೀಯ ಸಾಮರಸ್ಯ ಕಣ್ಮರೆಯಾಗುತ್ತಿದೆ; ಮುಖ್ಯಮಂತ್ರಿಯ ಸ್ಥಾನಮಾನ ಕುಸಿಯುತ್ತಿದೆ ಎಂದು ಅವರು ಹೇಳಿದರು.
ಸಮ್ಮಿಶ್ರ ಸರ್ಕಾರದಿಂದ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ ಹದಗೆಡುವಂತಾಗಿದೆ. ಸಮನ್ವಯ ಸಮಿತಿ ಎಂಬುದು ಲಿಸೂಪರ್ ಕ್ಯಾಬಿನೆಟ್ಳಿ ಆಗಿ ವರ್ತಿಸುತ್ತಿದೆ. ಅಧಿಕಾರಿಗಳು ಆಡಳಿತ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯನವರನ್ನು ಸನ್ಮಾನಿಸಲಾಯಿತು.
|