ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆದಿಚುಂಚನಗಿರಿಯಲ್ಲಿ ಪತ್ರಕರ್ತರ ಅಧಿವೇಶನ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಐಎಫ್‌ಡಬ್ಲ್ಯೂಜೆ) ಆಶ್ರಯದಲ್ಲಿ ಡಿಸೆಂಬರ್ 30ರಿಂದ ಜನವರಿ 2ರವರೆಗೆ 63ನೇ ಪತ್ರಕರ್ತರ ರಾಷ್ಟ್ರೀಯ ಮಂಡಳಿ ಅಧಿವೇಶನ ಆದಿಚುಂಚನಗಿರಿಯಲ್ಲಿ ನಡೆಯಲಿದೆ.

ಈ ಅಧಿವೇಶನದಲ್ಲಿ ದೇಶದ ನಾನಾ ಭಾಗಗಳ ಸುಮಾರು 1000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಲ್ಲದೆ ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾ ದೇಶಗಳ ಪತ್ರಕರ್ತರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಐಎಫ್‌ಡಬ್ಲ್ಯುಜೆಯ ಉಪಾಧ್ಯಕ್ಷ ಎಚ್. ಮದನ ಗೌಡ ತಿಳಿಸಿದ್ದಾರೆ.

ಅಧಿವೇಶನವನ್ನು ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಉದ್ಘಾಟಿಸಲಿದ್ದು, ಕೇಂದ್ರ ಭೂ ಸಾರಿಗೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಮತ್ತು ಮಾನವ ಹಕ್ಕುಗಳು ಮತ್ತು ಮಾಧ್ಯಮ ಮತ್ತು ಭಯೋತ್ಪಾದನೆ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷ್ಷತೆಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್‌ರವರು ಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಕೇಂದ್ರ ಯೋಜನಾ ಸಚಿವ ಎಂ.ವಿ. ರಾಜಶೇಖರನ್ ಮಾಡಲಿದ್ದಾರೆ ಎಂದು ಮದನಗೌಡ ತಿಳಿಸಿದರು.
ಮತ್ತಷ್ಟು
ಕೃಷಿ, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ:ರಾಜಶೇಖರನ್
ಗ್ರಾಹಕರ ಹಕ್ಕು ಕಾಯ್ದೆ ಆಸ್ಪತ್ರೆಗೂ ವಿಸ್ತರಿಸಲು ಸಲಹೆ
ಸಮ್ಮಿಶ್ರ ಸರ್ಕಾರದಲ್ಲಿ ಹುಳುಕುಗಳೇ ಅಧಿಕ
ಗೊಂದಲದ ಗೂಡಲ್ಲಿ ಎಂ.ಪಿ. ಪ್ರಕಾಶ್ ಬಂದಿ
ಕೋಮುವಾದ ಅಭಿವೃದ್ದಿಗೆ ಮಾರಕ: ಚಂದ್ರಶೇಖರ್
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ರಾಜಶೇಖರನ್