ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಮರಳುವುದಾಗಿ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿಯವರ ಹುಟ್ಟುಹಬ್ಬದ ದಿನದ ಅಂಗವಾಗಿ ಈ ನಿರ್ಣಯವನ್ನು ತಿಳಿಸಿದ ಅವರು ವಿಜಾಪುರ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದರು.
ತಾವು ಹೊಸದಾಗಿ ಆರಂಬಿಸಲಿರುವ ಸಿದ್ದೇಶ್ವರ ಟ್ರಸ್ಟ್ ಅಡಿಯಲ್ಲಿ 4 ಯೋಜನೆ ಹಮ್ಮಿಕೊಳ್ಳಲಾಗಿದ್ದು, ಸಮಾಜ ಸೇವೆ ಸಲ್ಲಿಸುವವರಿಗೆ ತಿಂಗಳ ಮಾಸಾಶನ, ಬಡ ರೋಗಿಗಳ ಚಿಕಿತ್ಸೆಗೆ ಹಣ ನೀಡುವುದಾಗಿ ಅವರು ತಿಳಿಸಿದರು.
|