ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂ.ಪಿ.ಪ್ರಕಾಶ್ ಕಾಂಗ್ರೆ‌ಸ್‌ಗೆ ಸೇರುವರೇ?
NEWS ROOM
ಜೆಡಿಎಸ್‌ನಿಂದ ಬಂಡೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂಬ ಸುದ್ದಿಗಳೀಗೀಗ ಚಾಲನೆ ದೊರೆತಿದೆ. ಈ ಹಿಂದೆ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಸಾಕಷ್ಟು ಪ್ರಯತ್ನಗಳು ತೆರೆಮರೆಯಲ್ಲಿ ನಡೆದಿತ್ತು.

ಇಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಪ್ರಕಾಶ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಈ ಸುದ್ದಿಗಳಿಗೆ ಪುಷ್ಟಿ ನೀಡಿದೆ. ಕಾಂಗ್ರೆಸ್‌ಗೆ ಸೇರಿದಲ್ಲಿ ಪ್ರಕಾಶ್ ಹಾಗೂ ಅವರ ಬೆಂಬಲಿಗರ ಹಿತರಕ್ಷಣೆ ಮಾಡುವ ಕುರಿತು ಸೋನಿಯಾ ಅವರೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನು ಆಸ್ಕರ್ ಸಮಾಲೋಚನೆ ವೇಳೆಯಲ್ಲಿ ನೀಡಿದರೆಂದು ಸುದ್ದಿಮೂಲಗಳು ತಿಳಿಸಿವೆ.

ಯಾವ ಪಕ್ಷ ಸೇರಬೇಕೆಂದು ತಾವು ಇನ್ನೂ ತೀರ್ಮಾನಿಸಿಲ್ಲ. ತಮ್ಮ ಹಾಗೂ ತಮ್ಮ ಬೆಂಬಲಿಗರ ಹಿತರಕ್ಷಣೆ ಆಗುವುದಾದಲ್ಲಿ ಕಾಂಗ್ರೆಸ್ ಸೇರಲು ಅಡ್ಡಿಯಿಲ್ಲ ಎಂದು ಪ್ರಕಾಶ್‌ರವರು ಆಸ್ಕರ್ ಫರ್ನಾಂಡಿಸ್‌ ಅವರಿಗೆ ತಿಳಿಸಿದರೆಂದು ಸುದ್ದಿಮೂಲಗಳು ವರದಿಮಾಡಿವೆ.
ಮತ್ತಷ್ಟು
ಹೈಕಮಾಂಡ್‌ಗೆ ತಲುಪಿದ ಮುಖಂಡರ ಜಟಾಪಟಿ
ಸ್ಫೂರ್ತಿ ಸೇವಾ ಟ್ರಸ್ಟಿನಿಂದ ಅನ್ನಬ್ರಹ್ಮಳಿ ಯೋಜನೆ
ಸರ್ವರ ಸುಖವೇ ಭಾರತೀಯ ಸಂಸ್ಕ್ಕತಿಯ ತತ್ವ
ರಾಜ್ಯ ರಾಜಕೀಯಕ್ಕೆ ಯತ್ನಾಳ್ ಯತ್ನ
ಆದಿಚುಂಚನಗಿರಿಯಲ್ಲಿ ಪತ್ರಕರ್ತರ ಅಧಿವೇಶನ
ಕೃಷಿ, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ:ರಾಜಶೇಖರನ್