ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಕಾಶ್ ಜೆಡಿಎಸ್‌ನಲ್ಲೇ ಉಳಿಯಲಿ: ಮೆರಾಜುದ್ದೀನ್
ಹಿರಿಯ ಮುಖಂಡರಾದ ಎಂ.ಪಿ.ಪ್ರಕಾಶ್‌ರವರು ಜೆಡಿಎಸ್‌ನಲ್ಲಿಯೇ ಉಳಿದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವಿಚಾರವಂತರಾದ ಪ್ರಕಾಶ್‌ರವರ ಬಗೆಗೆ ನಮಗೆಲ್ಲ ಅಪಾರ ಗೌರವವಿದೆ. ಪಕ್ಷ ತೊರೆಯುವಂತೆ ನಾವ್ಯಾರೂ ಅವರಿಗೆ ತಿಳಿಸಿಲ್ಲ. ಬದಲಿಗೆ ಪಕ್ಷದಲ್ಲಿಯೇ ಉಳಿಯುವಂತೆ ಮನವಿ ಮಾಡಲಾಗಿದೆ ಎಂದರು.

ಪಕ್ಷದಲ್ಲಿಯೇ ಉಳಿಯುವಂತೆ ಪಕ್ಷದ ವರಿಷ್ಠ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸೇರಿದಂತೆ ಹಲವರು ಅವರನ್ನು ಸಾಕಷ್ಟು ಒತ್ತಾಯಿಸಿದರು. ಆದರೆ ಪ್ರಕಾಶ್ ಅದಕ್ಕೆ ಮಣಿಯಲಿಲ್ಲ. ಈಗ ಮುಂದೆ ಯಾವ ಪಕ್ಷ ಸೇರಬೇಕು ಎಂಬ ಕುರಿತು ಅನಗತ್ಯ ಗೊಂದಲಕ್ಕೆ ಸಿಲುಕಿದ್ದಾರೆ. ಅದರ ಬದಲು ಅವರು ಜೆಡಿಎಸ್‌ನಲ್ಲಿಯೇ ಉಳಿದು ನಮಗೆಲ್ಲ ಮಾರ್ಗದರ್ಶನ ನೀಡಲಿ ಎಂದು ಮೆರಾಜುದ್ದೀನ್ ನುಡಿದರು.

ಜೆಡಿಎಸ್ ತತ್ವ-ಸಿದ್ದಾಂತಗಳನ್ನು ಒಪ್ಪಿಕೊಂಡು ಬರುವ ಯಾರಿಗೇ ಆಗಲಿ ಪಕ್ಷಕ್ಕೆ ಸ್ವಾಗತವಿದೆ. ಹೀಗೆ ಸೇರಿದವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ ಎಂದು ಪಟೇಲ್ ತಿಳಿಸಿದರು.
ಮತ್ತಷ್ಟು
ಎಂ.ಪಿ.ಪ್ರಕಾಶ್ ಕಾಂಗ್ರೆ‌ಸ್‌ಗೆ ಸೇರುವರೇ?
ಹೈಕಮಾಂಡ್‌ಗೆ ತಲುಪಿದ ಮುಖಂಡರ ಜಟಾಪಟಿ
ಸ್ಫೂರ್ತಿ ಸೇವಾ ಟ್ರಸ್ಟಿನಿಂದ ಅನ್ನಬ್ರಹ್ಮಳಿ ಯೋಜನೆ
ಸರ್ವರ ಸುಖವೇ ಭಾರತೀಯ ಸಂಸ್ಕ್ಕತಿಯ ತತ್ವ
ರಾಜ್ಯ ರಾಜಕೀಯಕ್ಕೆ ಯತ್ನಾಳ್ ಯತ್ನ
ಆದಿಚುಂಚನಗಿರಿಯಲ್ಲಿ ಪತ್ರಕರ್ತರ ಅಧಿವೇಶನ