ಮುಂಬರುವ ಚುನಾವಣೆಯಲ್ಲಿ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡುವ ಚಿಂತನೆಯನ್ನು ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡಿಸಿದ್ದಾರೆ.ಪ್ರಗತಿಪರ ಸಂಘಟನೆಗಳ ಮುಖಂಡರು ನಗರದಲ್ಲಿ ಸಭೆ ನಡೆಸಿ, ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದು, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಗಟ್ಟಲು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಿ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವ ಹಾಗೂ ಮತಗಳು ಹಂಚಿಹೋಗದಂತೆ ತಡೆಗಟ್ಟುವ ನಿರ್ಧಾರವನ್ನು ತೆಗೆದುಕೊಂಡರು.
ಈ ಮೂಲಕ ಕಾರ್ಮಿಕ ಸಂಘಟನೆಗಳು, ಜಾತ್ಯತೀತ ಶಕ್ತಿಗಳು, ರೈತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ ಮೊದಲಾದ ಅಲ್ಪಸಂಖ್ಯಾತ ಸಂಘಟನೆಗಳನ್ನು ಒಗ್ಗೂಡಿಸಿ ಜನಜಾಗೃತಿ ಮೂಡಿಸುವುದು. ಸಿದ್ದರಾಮಯ್ಯ ಮತ್ತು ಮಹದೇವ್ ನಡುವಿನ ಜಟಾಪಟಿಗೆ ಜಾತಿಯ ಬಣ್ಣ ಲೇಪನ ಮಾಡದೆ, ಪರ-ವಿರೋಧ ಪ್ರತಿಭಟನೆಗಳನ್ನು ಕೈ ಬಿಡಬೇಕೆಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಮಾರಂಭದಲ್ಲಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಸಾಹಿತಿ ದೇವನೂರು ಮಹದೇವ, ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಮತ್ತಿತರು ಭಾಗವಹಿಸಿದ್ದರು.
|