ಮಾತೃಭಾಷೆಯನ್ನು ಅರಿತುಕೊಳ್ಳುವುದರ ಮೂಲಕ ಅಧ್ಯಾತ್ಮ ಸಾಧನೆಗೆ ಸಂಸ್ಕ್ಕತವು ಚೈತನ್ಯದಾಯಕವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಯೋಜಿಸಿರುವ ಅಖಿಲ ಭಾರತ ಸಂಸ್ಕ್ಕತ ಭಾಷಣಸ್ಪರ್ಧಾ ಸಮಾವೇಶದಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ನಾನಾ ಸ್ಪರ್ಧೆಗಳನ್ನು ನಡೆಸುವ ಮೂಲಕ ಸಂಸ್ಕ್ಕತದಲ್ಲಿ ಪರಿಣತಿ ಹೊಂದಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ರಾಷ್ಟ್ತ್ರೀಯ ಸಂಸ್ಕೃತ ವಿದ್ಯಾಪೀಠದ ವಿಶ್ರಾಂತ ಕುಲಪತಿ ಪ್ರೊ. ರಾಮರಂಜನ ಮುಖರ್ಜಿ ಮಾತನಾಡಿ, ದೇಶದ ವೈವಿಧ್ಯಮಯ ಸಂಸ್ಕ್ಕತಿಯ ಮಧ್ಯದಲ್ಲಿ ಏಕತೆಯನ್ನು ಕಾಪಾಡುವುದರಲ್ಲಿ ಸಂಸ್ಕೃತ ಭಾಷೆ ಮಹತ್ವವಾದ ಹೆಜ್ಜೆಯನ್ನು ಇಟ್ಟಿದೆ. ಎರಡು ಸಾವಿರ ವರ್ಷಗಳ ಹಿಂದೆ ರಚಿತವಾದ ಪಾಣಿನಿಯ ವ್ಯಾಕರಣ ಗ್ರಂಥ ಮನುಷ್ಯ ಬುದ್ದಿಗೆ ನಿಲುಕಿದ ಅತ್ಯಂತ ಶ್ರೇಷ್ಠವಾದ ಗ್ರಂಥ ಎಂದು ಅಭಿಪ್ರಾಯಪಟ್ಟರು.
ಅಂತಾರಾಷ್ಟ್ತ್ರೀಯ ಸಂಸ್ಕ್ಕತ ಅಧ್ಯಯನ ಕೇಂದ್ರದ ಮಾಜಿ ಅಧ್ಯಕ್ಷ ಪ್ರೊ. ರಾಮಕರಣ ಶರ್ಮಾ ಮಾತನಾಡಿ, ಸಂಸ್ಕ್ಕತ ಭಾಷೆಯನ್ನು ಉಳಿಸಿ ಬೆಳೆಸಲು ಇಂತಹ ಸ್ಪರ್ಧೆಗಳು ಸಹಾಯಕವಾಗುತ್ತವೆ ಎಂದು ತಿಳಿಸಿದರು.
ಈ ಸಮಾವೇಶದ ಉಸ್ತುವಾರಿಯನ್ನು ದಿಲ್ಲಿಯ ರಾಷ್ಟ್ತ್ರೀಯ ಸಂಸ್ಕ್ಕತ ಸಂಸ್ಥಾನವು ವಹಿಸಿಕೊಂಡಿದೆ. ಡಿ.28ರವರೆಗೆ ನಡೆಯುವ ಈ ಸಮಾವೇಶದಲ್ಲಿ ಸಂಸ್ಕ್ಕತ ಭಾಷೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ 8 ಶಾಸ್ತ್ತ್ರಗಳ ಭಾಷಣ ಸ್ಪರ್ಧೆ ಹಾಗೂ ಅಂತ್ಯಾಕ್ಷರಿ ಸ್ಪರ್ಧೆಗಳು ಸೇರಿವೆ. ಸಹಸ್ರಾರು ವರ್ಷಗಳ ಹಿನ್ನೆಲೆಯಿರುವ ಶಲಾಕ ಸ್ಪರ್ಧೆಯೂ ಈ ಸಂದರ್ಭದಲ್ಲಿ ನಡೆಯಲಿದೆ. ಶಲಾಕ ಕಡ್ಡಿಯನ್ನು ಪುಸ್ತಕದೊಳಗೆ ಹಾಕಿದಾಗ ಯಾವ ವಿಷಯ ಬರುವುದೋ ವಿದ್ಯಾರ್ಥಿಗಳು ಅದರ ಮೇಲೆ ಭಾಷಣ ಮಾಡಬೇಕಾಗುತ್ತದೆ. ಇದರಿಂದ ಪ್ರಾಚೀನ ಭಾರತದ ಬೌದ್ದಿಕ ಪರಂಪರೆ ಅನಾವರಣಗೊಳ್ಳಲು ಸಾಧ್ಯವಿದೆ.
ಈ ಸಮಾವೇಶಕ್ಕೆ 17 ರಾಜ್ಯದ 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಲಿದ್ದು, ಸಂಸ್ಕ್ಕತದಲ್ಲಿ ಪದವಿ ಪೂರೈಸಿದ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗದಲ್ಲಿರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.
|