ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಸಿಸಿ ಪುನಾರಚನೆ ಶೀಘ್ರ ಕಸರತ್ತು ಪ್ರಾರಂಭ
ಗುಜರಾತ್ ರಾಜ್ಯದ ಚುನಾವಣೆ ಫಲಿತಾಂಶದ ಬಿಸಿ ರಾಜ್ಯದ ಮೇಲೆ ತಟ್ಟುತ್ತಿರುವುದು ಕಂಡುಬರುತ್ತಿದೆ. ಫಲಿತಾಂಶದಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷವು ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಪುನಾರಚನೆ ಕಾರ್ಯವನ್ನು ಮುಂದಿನ ವಾರ ಆರಂಭಿಸುವ ಸಾಧ್ಯತೆ ನಿಚ್ಚಳವಾಗಿದೆ.

ಹಿಮಾಚಲ ಪ್ರದೇಶದ ಫಲಿತಾಂಶ ಹೊರಬರಬೇಕಿದ್ದು, ಮುಂದಿನ ವಾರದ ವೇಳೆಗೆ ಎಲ್ಲ ಪೂರ್ಣಗೊಳ್ಳಲಿದೆ. ನಂತರ ಕಾಂಗ್ರೆಸ್ ಹೈಕಮಾಂಡ್ ಪುನಾರಚನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಮುಂದಿನ ವಿಧಾನಸಭಾ ಚುನಾವಣೆಯು ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಪುನಾರಚನೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಸಿಕ್ಕಿದೆ.

ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುವುದು ಬಹುತೇಕ ಖಚಿತವಾಗಿದ್ದು, ಉಳಿದ ಪ್ರಮುಖ ಸ್ಥಾನಗಳಿಗೆ ಕೆಲವು ನಾಯಕರ ಸೇರ್ಪಡೆಯಾಗುವ ನೀರೀಕ್ಷೆಯಿದೆ.

ಅಲ್ಲದೆ, ಮಹಾರಾಷ್ಟ್ರದ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ರಾಜ್ಯ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಚಲಾವಣೆಯಲ್ಲಿದ್ದರೂ ಇತ್ತೀಚಿನ ಬೆಳವಣಿಗೆಯಲ್ಲಿ ಇಂತಹ ಮುನ್ಸೂಚನೆ ಇದುವರೆಗೆ ಕಂಡು ಬಂದಿಲ್ಲ.

ಸಿದ್ದು ಗುದ್ದು ಪ್ರಕರಣಕ್ಕೆ ಕೃಷ್ಣರವರೇ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ವಲಸೆ ಕಾಂಗ್ರೆಸಿಗರಿಂದ ಮೂಲ ಕಾಂಗ್ರೆಸಿಗರು ಮೂಲೆ ಗುಂಪಾಗುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಈ ಪುನಾರಚನೆ ಆರಂಭವಾಗುವ ಮೊದಲೇ ಇದನ್ನೆಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ತಲುಪಿಸಲು ಕೆಲವು ನಾಯಕರು ಕಾದು ಕುಳಿತಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಮತ್ತಷ್ಟು
ಅಧ್ಯಾತ್ಮ ಸಾಧನೆಗೆ ಸಂಸ್ಕ್ಕತ ಅಭ್ಯಾಸ ಮುಖ್ಯ
ದತ್ತಪೀಠ ಹಿಂದುಗಳಿಗೆ ಸೇರಿದ್ದು: ಚಿದಾನಂದ ಮೂರ್ತಿ
ಪ್ರೀತಿ... ಬಿಡುಗಡೆಗೆ ಅವಕಾಶ ಕೊಡೆವು: ಶ್ರೀರಾಮ ಸೇನೆ
ತಂದೆ, ತಾಯಿ ಶವದೊಂದಿಗೆ ಎರಡು ರಾತ್ರಿ
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಚಿಂತನೆ
ಅಶ್ವಿನಿ ಸ್ಟುಡಿಯೋಗೆ ಶ್ರೀರಾಮ ಸೇನಾ ಮುತ್ತಿಗೆ