ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖಳನಾಯಕನಂತೆ ಬಿಂಬಿಸಬೇಡಿ: ಪೇಜಾವರ ಶ್ರೀ
ಪುತ್ತಿಗೆ ಮಠಾಧೀಶರಾದ ಶ್ರೀ ಸ್ರೀ ಸುಗುಣೇಂದ್ರ ತೀರ್ಥರೊಂದಿಗೆ ತಮಗ್ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.ಪರ್ಯಾಯದ ದಿನಾಂಕವು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪುತ್ತಿಗೆ ಶ್ರೀಗಳ ಉಡುಪಿ ಪುರಪ್ರವೇಶ ಸನ್ನಿಹಿತವಾಗುತ್ತಿರುವ ಸಮಯದಲ್ಲಿ ಧರ್ಮ ಜಿಜ್ಞಾಸುಗಳ ಗಮನ ಅತ್ತ ಕಡೆಯೇ ಹೊರಳುತ್ತಿದೆ. ಈ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪೇಜಾವರ ಶ್ರೀಗಳು ಮಾತನಾಡುತ್ತಿದ್ದರು.

ಪುತ್ತಿಗೆ ಶ್ರೀಗಳ ಪುರ ಪ್ರವೇಶದ ನಂತರ ಪರ್ಯಾಯ ಮತ್ತು ಶ್ರೀಕೃಷ್ಣ ಪೂಜೆಗೆ ಸಂಬಂಧಿಸಿದಂತೆ ಅವರೊಂದಿಗೆ, ವಿದ್ವಾಂಸರೊಂದಿಗೆ ಚರ್ಚೆಗಳನ್ನು ನಡೆಸಲಾಗುವುದು. ಅನವಶ್ಯಕ ಗೊಂದಲಗಳು ಬೇಡ. ಈ ವಿಷಯಕ್ಕೆ ಸಂಬಂಧಿಸಿ ವಿನಾಕಾರಣ ತಮ್ಮನ್ನು ಖಳನಾಯಕನಂತೆ ಚಿತ್ರಿಸುವುದು ನಿಲ್ಲಲಿ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಶ್ರೀಕೃಷ್ಣ ಮಠಕ್ಕೆ ಅದರದ್ದೇ ಆದ ರೀತಿ ರಿವಾಜುಗಳಿವೆ. ನಮ್ಮ ಯಾವುದೇ ಧಾರ್ಮಿಕ ಕಟ್ಟುಪಾಡುಗಳು, ಅಚರಣೆಗಳು ಸಾರ್ವಜನಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ರಚಿಸಿದಂತಹವುಗಳಾಗಿರಬೇಕು. ಪುತ್ತಿಗೆ ಶ್ರೀಗಳು ಉಡುಪಿಗೆ ಬಂದನಂತರ ಅಷ್ಟಮಠಗಳ ಸಂವಿಧಾನ ರಚಿಸುವ ಕುರಿತು ಸಮಾಲೋಚನೆಗಳು ನಡೆಯಬೇಕಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಮತ್ತಷ್ಟು
ಭವಿಷ್ಯದ ರಾಜಕೀಯ: ನಿರ್ಧಾರ ಪ್ರಕಟಿಸದ ಪ್ರಕಾಶ್
ಅಷ್ಟಮಠಗಳಿಗೆ ಮಾತ್ರ ಕೃಷ್ಣ ಪೂಜೆ ಹಕ್ಕು
ಕೆಪಿಸಿಸಿ ಪುನಾರಚನೆ ಶೀಘ್ರ ಕಸರತ್ತು ಪ್ರಾರಂಭ
ಅಧ್ಯಾತ್ಮ ಸಾಧನೆಗೆ ಸಂಸ್ಕ್ಕತ ಅಭ್ಯಾಸ ಮುಖ್ಯ
ದತ್ತಪೀಠ ಹಿಂದುಗಳಿಗೆ ಸೇರಿದ್ದು: ಚಿದಾನಂದ ಮೂರ್ತಿ
ಪ್ರೀತಿ... ಬಿಡುಗಡೆಗೆ ಅವಕಾಶ ಕೊಡೆವು: ಶ್ರೀರಾಮ ಸೇನೆ