ಮೈಸೂರಿನ ಯುವ ಕಾಂಗ್ರೆಸ್ ಚೈತನ್ಯ ಸಮಾವೇಶದಲ್ಲಿ ತಮ್ಮೊಂದಿಗೆ ಸಿದ್ದು ನಡೆಸಿದ ಜಟಾಪಟಿಯ ಕುರಿತಾದ ಮಾಹಿತಿಯಿರುವ ಸಿ.ಡಿ.ಯನ್ನು ಮಾಜಿ ಸಚಿವ ಎಂ.ಮಹದೇವ್ ಸೋನಿಯಾ ಗಾಂಧಿಯವರಿಗೆ ಕಳಿಸಿಕೊಟ್ಟಿರುವುದು ಸಿದ್ರಾಮಯ್ಯನವರನ್ನು ಕೆರಳಿಸಿದಂತಿದೆ.
ಈ ಕುರಿತು ಪ್ರಶ್ನಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ.ಯನ್ನು ಸೋನಿಯಾ ಮೇಡಂಗೆ ಕಳಿಸಿದ್ರೆ ಕಳಿಸ್ಲಿ, ಅದರಿಂದ ನನಗೇನು? ಕೆಪಿಸಿಸಿ ಅಧ್ಯಕ್ಷರು ಬಂದಿದ್ದಾರೆ, ಬೇಕಿದ್ದರೆ ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದರು.
ಈ ಕುರಿತು ಸುದ್ದಿಗಾರರು ಮತ್ತಷ್ಟು ಪ್ರಶ್ನೆಗಳನ್ನು ಕೇಳಿದಾಗ, ಮಾಧ್ಯಮದವರ ಮೇಲೆ ಹರಿಹಾಯ್ದ ಸಿದ್ದು, ಇದೆಲ್ಲಾ ಮಾಧ್ಯಮದವರ ಸೃಷ್ಟಿಯಷ್ಟೇ ಎಂದು ಕಿಡಿಯಾದರು..!!
ಸಿ.ಡಿ.ಬಂದಿಲ್ಲ: ಖರ್ಗೆ ಪ್ರತಿಕ್ರಿಯೆ
ಸಿದ್ದರಾಮಯ್ಯ ಪ್ರಕರಣದ ಕುರಿತಾದ ಯಾವ ಸಿ.ಡಿ.ಯೂ ಕೆಪಿಸಿಸಿಗೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ವಿಷಯಕ್ಕೆ ಅಷ್ಟೊಂದು ಮಹತ್ವ ನೀಡುವ ಅಗ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
|