ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್ ರಂಗದಲ್ಲಿ ಬದಲಾವಣೆ ಅಗತ್ಯ
ಭಾರತವು ಅಭಿವೃದ್ದಿ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದರೂ, ಮೂಲ ಸೌಕರ್ಯದ ಪ್ರಮಾಣದಲ್ಲಿ ಕುಂಠಿತವಾಗಿರುವುದರಿಂದ ವಿದ್ಯುತ್ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯ ಎಂದು ಗ್ರಾಮೀಣ ವಿದ್ಯುದೀಕರಣ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕೆ. ಲಖಿನಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ವಿದ್ಯುತ್ ಮಂಡಲಿಯ ಇಂಜಿನಿಯರುಗಳ ಸಂಘವು ನಗರದಲ್ಲಿ ಆಯೋಜಿಸಿದ್ದ 22ನೇ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ದೇಶವು ಈಗಾಗಲೇ ಶಿಕ್ಷಣ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಸಾಧಿಸಿದೆ. ಆದರೆ ವಿದ್ಯುತ್ ರಂಗದಲ್ಲಿ ಗಮನಾರ್ಹ ಬದಲಾವಣೆ ಆಗಬೇಕಿದೆ. ಮುಂದಿನ 30 ವರ್ಷಗಳಲ್ಲಿ ದೇಶದ ಬೆಳವಣಿಗೆಗೆ ವಿದ್ಯುತ್ ಕೊರತೆಯೇ ಮುಖ್ಯ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯುತ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ಶೇಕಡ 25ರಷ್ಟು ನಗರಗಳ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಬೇಕೆಂದು ಅನಿಲ್ ಲಖಿನಾ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೀಲೀಪ್ ರಾವ್ 2008ರ ಟೆಕ್ನಿಕಲ್ ಡೈರಿ ಮತ್ತು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಕರ್ನಾಟಕ ವಿದ್ಯುತ್ ಮಂಡಳಿಯ ಅಧ್ಯಕ್ಷ ಸತ್ಯಪ್ರೇಮ ಕುಮಾರ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಭರತ್ಲಾಲ್ ಮೀನಾ, ರಾಕೇಶ್ ಅರೋರ, ಅಶೋಕ್ ಅಂಗಡಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ಸಿ.ಡಿ. ಕಳಿಸಿದ್ರೆ ಕಳಿಸ್ಲಿ: ಸಿದ್ದರಾಮಯ್ಯ ಕಿಡಿ
ಮಹದೇವ್ ಉಚ್ಚಾಟನೆಗೆ ರಘುಪತಿ ಒತ್ತಾಯ
ಖಳನಾಯಕನಂತೆ ಬಿಂಬಿಸಬೇಡಿ: ಪೇಜಾವರ ಶ್ರೀ
ಭವಿಷ್ಯದ ರಾಜಕೀಯ: ನಿರ್ಧಾರ ಪ್ರಕಟಿಸದ ಪ್ರಕಾಶ್
ಅಷ್ಟಮಠಗಳಿಗೆ ಮಾತ್ರ ಕೃಷ್ಣ ಪೂಜೆ ಹಕ್ಕು
ಕೆಪಿಸಿಸಿ ಪುನಾರಚನೆ ಶೀಘ್ರ ಕಸರತ್ತು ಪ್ರಾರಂಭ