ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿತ್ರಮಂದಿರಕ್ಕೆ ಲಗ್ಗೆ ಹಾಕಿದ ಶ್ರೀರಾಮಸೇನೆ
ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಸುಳ್ಳೇ ಸುಳ್ಳು ಹಾಡಿನಲ್ಲಿನ ವಿವಾದಸ್ಪದ ಸಾಲುಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಶ್ರೀರಾಮ ಸೇನಾದ ಕಾರ್ಯಕರ್ತರು ಇಂದು ಬೆಳಗ್ಗೆ ಕಪಾಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿದರು.

ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ವಿವಾದಿತ ಸಾಲುಗಳನ್ನು ತೆಗೆಯುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ. ಇದರಿಂದೇನಾದರೂ ಅನಾಹುತಕಾರಿ ಘಟನೆಗಳು ಸಂಭವಿಸಿದರೆ ಅದಕ್ಕೆ ತಾವು ಜವಾಬ್ದಾರರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಾರಾಯಣಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಪ್ರೇಮ್ ಪರವಾಗಿ ನಿಂತು ಚಿತ್ರ ಬಿಡುಗಡೆಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಇವರ ಮತ್ತು ಶ್ರೀರಾಮಸೇನಾದ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆದಿದ್ದು ಕಂಡುಬಂತು.

ಈ ಸಂದರ್ಭದಲ್ಲಿ ಶ್ರೀರಾಮಸೇನಾದ ನಗರ ಘಟಕದ ಅಧ್ಯಕ್ಷ ವಸಂತ್ ಕುಮಾರ್ ಭವಾನಿಯವರು ಮಾತನಾಡುತ್ತಾ, ಈಗಾಗಲೇ ರಾಜ್ಯದೆಲ್ಲೆಡೆ ಎಲ್ಲ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ನಿಲ್ಲಿಸಿದ್ದೇವೆ. ಈ ಚಿತ್ರಮಂದಿರದಲ್ಲಿ ನಿಲ್ಲಿಸುವುದರ ಮೂಲಕ ನಮಗೆ ಸಹಕರಿಸಿ ಎಂದು ಚಿತ್ರಮಂದಿರದ ಸಿಬ್ಬಂದಿಯನ್ನು ಕೇಳಿಕೊಂಡರು.
ಮತ್ತಷ್ಟು
ವಿದ್ಯುತ್ ರಂಗದಲ್ಲಿ ಬದಲಾವಣೆ ಅಗತ್ಯ
ಸಿ.ಡಿ. ಕಳಿಸಿದ್ರೆ ಕಳಿಸ್ಲಿ: ಸಿದ್ದರಾಮಯ್ಯ ಕಿಡಿ
ಮಹದೇವ್ ಉಚ್ಚಾಟನೆಗೆ ರಘುಪತಿ ಒತ್ತಾಯ
ಖಳನಾಯಕನಂತೆ ಬಿಂಬಿಸಬೇಡಿ: ಪೇಜಾವರ ಶ್ರೀ
ಭವಿಷ್ಯದ ರಾಜಕೀಯ: ನಿರ್ಧಾರ ಪ್ರಕಟಿಸದ ಪ್ರಕಾಶ್
ಅಷ್ಟಮಠಗಳಿಗೆ ಮಾತ್ರ ಕೃಷ್ಣ ಪೂಜೆ ಹಕ್ಕು