ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಕ ವತಿಯಿಂದ ವಿಶ್ವ ಕನ್ನಡ ಸಮ್ಮೇಳನ
ಅಮೆರಿಕದ ಅಕ್ಕ ಸಂಘಟನೆ ಪ್ರತಿವರ್ಷ ಆಯೋಜಿಸುವ ವಿಶ್ವ ಕನ್ನಡ ಸಮ್ಮೇಳನ ಈ ಬಾರಿ ಅಮೆರಿಕಾದ ಷಿಕಾಗೋದಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆಯಲಿದೆ ಎಂದು ಅಕ್ಕ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ರಮೇಶ್ ಗೌಡ ತಿಳಿಸಿದ್ದಾರೆ.

ಕರ್ನಾಟಕದ ಕಲೆ, ಸಂಸ್ಕ್ಕತಿ, ಸಂಪ್ರದಾಯಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಅಮೆರಿಕಾಕ್ಕೂ ಪಸರಿಸುವುದು ಸಮ್ಮೇಳನದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.

ವಿಶ್ವ ಕನ್ನಡಿಗರ ಪ್ರತಿಭೆ ಮತ್ತು ಸಂಸ್ಕ್ಕತಿ ಪ್ರದರ್ಶನ ಎಂಬ ಶೀರ್ಷಿಕೆಯಡಿ ಸಮಾವೇಶವನ್ನು ಆಯೋಜಿಸಿದ್ದು, ಸಮ್ಮೇಳನದ ಸಂಚಾಲಕರಾದ ಮೋಕ್ಷಗುಂಡಂ ಜಯರಾಂ, ವಾಸಂತಿ ಗೌಡ ಮತ್ತು ಶಿವಮೂರ್ತಿ ಕೀಲಾರವರ ನಾಯಕತ್ವದಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ ಮೊದಲಾದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು ಎಂದು ರಮೇಶ್ ಗೌಡ ತಿಳಿಸಿದರು.

ಈ ಸಮಾವೇಶದ ಸಂಪೂರ್ಣ ಅತಿಥ್ಯದ ಜವಾಬ್ದಾರಿಯನ್ನು ಷಿಕಾಗೋದ ವಿದ್ಯಾರಣ್ಯ ಕನ್ನಡ ಕೂಟವು ವಹಿಸಿಕೊಂಡಿದ್ದು, ಸುಮಾರು 7 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನೀರೀಕ್ಷೆ ಇದೆ. ಈ ಸಮ್ಮೇಳನದಲ್ಲಿ ಕರ್ನಾಟಕದ 30ರಿಂದ 40 ಕಲಾವಿದರು ಭಾಗವಹಿಸುವ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.
ಮತ್ತಷ್ಟು
ಚಿತ್ರಮಂದಿರಕ್ಕೆ ಲಗ್ಗೆ ಹಾಕಿದ ಶ್ರೀರಾಮಸೇನೆ
ವಿದ್ಯುತ್ ರಂಗದಲ್ಲಿ ಬದಲಾವಣೆ ಅಗತ್ಯ
ಸಿ.ಡಿ. ಕಳಿಸಿದ್ರೆ ಕಳಿಸ್ಲಿ: ಸಿದ್ದರಾಮಯ್ಯ ಕಿಡಿ
ಮಹದೇವ್ ಉಚ್ಚಾಟನೆಗೆ ರಘುಪತಿ ಒತ್ತಾಯ
ಖಳನಾಯಕನಂತೆ ಬಿಂಬಿಸಬೇಡಿ: ಪೇಜಾವರ ಶ್ರೀ
ಭವಿಷ್ಯದ ರಾಜಕೀಯ: ನಿರ್ಧಾರ ಪ್ರಕಟಿಸದ ಪ್ರಕಾಶ್