ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರ ಸಹಾಯಕ್ಕೆ ಸಲಹಾ ಕೇಂದ್ರ
ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸಹಾಯಕವಾಗುವಂತೆ ಸಲಹಾ ಕೇಂದ್ರಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಐಸಿಐಸಿಐ ಬ್ಯಾಂಕಿನ ಪ್ರಧಾನ ಕಚೇರಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಬಿ. ಮದಿವಣ್ಣನ್ ತಿಳಿಸಿದ್ದಾರೆ. ಇತ್ತೀಚೆಗೆ ಇಬ್ಬರು ರೈತರ ಆತ್ಮಹತ್ಯೆಯ ಪ್ರಕರಣದಿಂದ ಕಂಗೆಟ್ಟಿರುವ ಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯವರ್ತಿಗಳಿಂದ ರೈತರಿಗೆ ಹಿಂಸೆಯಾದರೆ, ಸಾಲ ಕಟ್ಟಲಾಗದೆ ಒತ್ತಡದಿಂದ ಬಳಲುತ್ತಿದ್ದರೆ, ಅಥವಾ ಇತರೆ ಯಾವುದೇ ರೀತಿಯ ತುರ್ತು ಮಾಹಿತಿ ಬೇಕಿದ್ದರೆ, ರೈತರು ಸಲಹಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರೈತರ ಅನುಕೂಲಕ್ಕಾಗಿ ಬ್ಯಾಂಕ್ ವ್ಯವಹಾರದ ಮಾಹಿತಿಯನ್ನು ಕನ್ನಡದಲ್ಲಿಯೇ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಅಕ್ಕ ವತಿಯಿಂದ ವಿಶ್ವ ಕನ್ನಡ ಸಮ್ಮೇಳನ
ಚಿತ್ರಮಂದಿರಕ್ಕೆ ಲಗ್ಗೆ ಹಾಕಿದ ಶ್ರೀರಾಮಸೇನೆ
ವಿದ್ಯುತ್ ರಂಗದಲ್ಲಿ ಬದಲಾವಣೆ ಅಗತ್ಯ
ಸಿ.ಡಿ. ಕಳಿಸಿದ್ರೆ ಕಳಿಸ್ಲಿ: ಸಿದ್ದರಾಮಯ್ಯ ಕಿಡಿ
ಮಹದೇವ್ ಉಚ್ಚಾಟನೆಗೆ ರಘುಪತಿ ಒತ್ತಾಯ
ಖಳನಾಯಕನಂತೆ ಬಿಂಬಿಸಬೇಡಿ: ಪೇಜಾವರ ಶ್ರೀ