ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಷಮೆ ಕೇಳದಿದ್ದರೆ ಪ್ರತಿಭಟನೆ: ಯಡಿಯೂರಪ್ಪ
NEWS ROOM
ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸಿ ಆತ್ಮವಿಶ್ವಾಸ ತುಂಬುವ ಬದಲಾಗಿ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾಮ್ದಾರ್ ರಾಜ್ಯದ ರೈತರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದ್ದಾರೆ.

ನಟ ಹಾಗೂ ಸಂಗೀತ ನಿರ್ದೇಶಕ ಮದನ್ ಪಟೇಲ್ ಮತ್ತು ಬೆಂಬಲಿಗರ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಎಸ್. ಎಂ. ಜಾಮ್ದಾರ್ರವರು ಪ್ರಕೃತಿ ವಿಕೋಪದಿಂದ ರೈತರಿಗೆ ಉಂಟಾದ ನಷ್ಟ ಭರಿಸುವುದಕ್ಕೆ ಸರ್ಕಾರ ವಿಮಾ ಕಂಪೆನಿಯೇನಲ್ಲ ಎಂದು ಹೇಳಿಕೆ ನೀಡಿದ್ದರು. ಈ ಉದ್ಧಟತನದ ಹೇಳಿಕೆಗೆ ಸಂಬಂಧಿಸಿ ರಾಜ್ಯಪಾಲರು ಜಾಮ್ದಾರ್ ಅವರಿಗೆ ಬುದ್ದಿ ಹೇಳಬೇಕು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಆರ್. ಅಶೋಕ್, ರಾಮಚಂದ್ರಗೌಡ ಹಾಗೂ ನಟ ಮಯೂರ್ ಪಟೇಲ್ ಉಪಸ್ಥಿತರಿದ್ದರು.
ಮತ್ತಷ್ಟು
ರೈತರ ಸಹಾಯಕ್ಕೆ ಸಲಹಾ ಕೇಂದ್ರ
ಅಕ್ಕ ವತಿಯಿಂದ ವಿಶ್ವ ಕನ್ನಡ ಸಮ್ಮೇಳನ
ಚಿತ್ರಮಂದಿರಕ್ಕೆ ಲಗ್ಗೆ ಹಾಕಿದ ಶ್ರೀರಾಮಸೇನೆ
ವಿದ್ಯುತ್ ರಂಗದಲ್ಲಿ ಬದಲಾವಣೆ ಅಗತ್ಯ
ಸಿ.ಡಿ. ಕಳಿಸಿದ್ರೆ ಕಳಿಸ್ಲಿ: ಸಿದ್ದರಾಮಯ್ಯ ಕಿಡಿ
ಮಹದೇವ್ ಉಚ್ಚಾಟನೆಗೆ ರಘುಪತಿ ಒತ್ತಾಯ