ಪ್ರಾಧ್ಯಾಪಕ, ಖ್ಯಾತ ವಿಮರ್ಶಕ, ನಾಟಕಕಾರ, ರಂಗಕರ್ಮಿಯಾಗಿದ್ದ ಚಿ.ಶ್ರೀನಿವಾಸರಾಜು ಅವರು ಇಂದು (ಶುಕ್ರವಾರ) ಬೆಳಿಗ್ಗೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಹೃದಯಘಾತದಿಂದ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ಕ್ರೈಸ್ತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಶ್ರೀನಿವಾಸರಾಜು, ಕಾಲೇಜಿನಲ್ಲಿ ಕನ್ನಡ ಸಂಘವು ಹುಟ್ಟಿ ಬೆಳೆಯಲು ಕಾರಣಕರ್ತರಾಗಿದ್ದಲ್ಲದೆ, ಅದರ ಮೂಲಕ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿದ್ದರು.
ಸಿನಿಮಾ ಮತ್ತು ನಾಟಕ ವಿಮರ್ಶಕರಾಗಿದ್ದ ರಾಜು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
|