ನಗರದ ಮೈಸೂರು ರಸ್ತೆಯ ಜನತಾ ಕಾರ್ಖಾನೆಯೊಂದರಲ್ಲಿ ಬೆಳಗಿನ ಜಾವ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಜನತಾ ಕಾಲೋನಿಯಲ್ಲಿರುವ ವೆಂಕಟೇಶ್ವರ ಎಂಟರ್‌ಪ್ರೈಸಸ್ ಎಂಬ ಮರದ ಕಾರ್ಖಾನೆಗೆ ಮುಂಜಾನೆ 3ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಬೆಂಕಿ ತಗುಲಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಖಾನೆಯಲ್ಲಿದ್ದ ಮರದ ದಿಮ್ಮಿಗಳು, ಹಲಗೆಗಳು, ಪ್ಲೈವುಡ್‌ಗಳು ಸೇರಿದಂತೆ ಬೆಲೆಬಾಳುವ ಕಚ್ಚಾವಸ್ತುಗಳು ಬೆಂಕಿಯಿಂದ ಸುಟ್ಟು ಹೋಗಿವೆ. ಕೂಡಲೇ ಅಗ್ನಿಶಾಮಕಪಡೆ ಕಾರ್ಯ ಪ್ರವೃತ್ತವಾಗಿ ಸುಮಾರು 6 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣವನ್ನು ಜೆ.ಜೆ. ನಗರ ಪೊಲೀಸರು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಗೆ ನಡೆಸಿದ್ದಾರೆ.
|