ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕ್ಕತಿಕ ಅಕಾಡೆಮಿಯ ವತಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 3ರಿಂದ ಆರಂಭಗೊಳ್ಳಲಿದೆ ಎಂದು ಚಿತ್ರೋತ್ಸವ ಸಮಿತಿಯ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ. ಒಂದು ವಾರ ಕಾಲ ನಡೆಯುವ ಈ ಉತ್ಸವದಲ್ಲಿ 41 ದೇಶಗಳ ಸುಮಾರು 120ಕ್ಕೂ ಅಧಿಕ ಪ್ರಸಿದ್ಧ ಚಿತ್ರಗಳು, ಸಿನಿಮಾ ರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಅಪರೂಪದ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಅಮೆರಿಕಾದ ಹೆಸರಾಂತ ಚಿತ್ರ ನಿರ್ಮಾತೃ ಜಿ. ನೊರೆಲ್ಲಿ, ಸೈಯದ್ ರವೆಜಿ, ಬಾಂಗ್ಲಾದ ಅಬು ಸಯೀದ್ ಶ್ರೀಲಂಕಾದ ಅಶೋಕ ಹಂದಗಾಮ ಸೇರಿದಂತೆ ವಿವಿಧ ದೇಶಗಳ ಚಿತ್ರರಂಗದ 12 ಮಂದಿ ಹಾಗೂ ಭಾರತದ ಸಿನಿಮಾ ಲೋಕದ 25 ಖ್ಯಾತನಾಮರು ಈ ಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಕಿರ್ಗಿಸ್ತಾನ ಖ್ಯಾತ ನಟಿ ತುರುಸ್ನಾಯ್ ಹಾಗೂ ಚೀನಾದ ಇಬ್ಬರು ಚಿತ್ರ ನಿರ್ಮಾಣಕಾರರು ಈ ಸಂದರ್ಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಗೀರೀಶ್ ಕಾಸರವಳ್ಳಿ ತಿಳಿಸಿದರು.

ಈ ಚಿತ್ರೋತ್ಸವವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಹೆಸರಾಂತ ಚಿತ್ರ ನಿರ್ದೇಶಕ ಆಡೂರ್ ಗೋಪಾಲಕೃಷ್ಣನ್ ವಹಿಸಲಿದ್ದಾರೆ. ದೇವನ್ ನಾಯರ್, ಶ್ಯಾಮ್ ಪ್ರಸಾದ್, ಗಜೇಂದ್ರ ಅಹಿರೆ, ಕಿರಣ್ ಶಾಂತಾರಾಮ್ ಮೊದಲಾದ ಗಣ್ಯರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ತಿಳಿದುಬಂದಿದೆ. ಸಮಾರೋಪದಂದು ಪಾರ್ವತಮ್ಮ ರಾಜಕುಮಾರ್ ಮತ್ತು ಕೆ.ಸಿ.ಎನ್. ಗೌಡ ಅವರಿಗೆ ಸನ್ಮಾನ ನಡೆಯಲಿದೆ.

ಕೆಂಗಲ್ ಹನುಮಂತಯ್ಯ ರಸ್ತೆಯ ವಿಷನ್ ಸಿನಿಮಾಸ್ ಕಾಂಪ್ಲೆಕ್ಸ್ ಹಾಗೂ ಕರ್ನಾಟಕ ಅರ್ಬನ್ ಕೋ-ಆಪ್ ಬ್ಯಾಂಕ್ ಫೆಡರೇಷನ್ ಕಟ್ಟಡದಲ್ಲಿನ ಕೆ.ಎಚ್. ಆಡಿಟೋರಿಯಂನಲ್ಲಿ ಈ ಪ್ರದರ್ಶನವು ನಡೆಯಲಿದೆ.
ಮತ್ತಷ್ಟು
ಕಾರ್ಖಾನೆಗೆ ಬೆಂಕಿ: ಲಕ್ಷಾಂತರ ರೂ. ಹಾನಿ
ಪ್ರಾಧ್ಯಾಪಕ ಶ್ರೀನಿವಾಸರಾಜು ಇನ್ನಿಲ್ಲ
ಗುಜರಾತ್, ಹಿಮಾಚಲ ಮಾದರಿಯಲ್ಲಿ ರಾಜ್ಯ ಬಿಜೆಪಿ
ದರ ಏರಿಕೆ ಹಗಲು ದರೋಡೆಯಲ್ಲ: ಹೊಟೇಲು ಸಂಘ
ಕ್ಷಮೆ ಕೇಳದಿದ್ದರೆ ಪ್ರತಿಭಟನೆ: ಯಡಿಯೂರಪ್ಪ
ರೈತರ ಸಹಾಯಕ್ಕೆ ಸಲಹಾ ಕೇಂದ್ರ